ಬಳ್ಳಾರಿ :ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯಾಗಿದ್ದ ವಿಭಾ ಅವರಿಗೆ ಪಿಎಚ್ಡಿ ಪದವಿ ಲಭಿಸಿದೆ.
ವಿವಿಯ ಭೌತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ತಿಪ್ಪೇರುದ್ರಪ್ಪ. ಜೆ ಅವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದ ಶುದ್ಧ ವಿಜ್ಞಾನದ ನಿಕಾಯದಡಿ “ಡಿಎಫ್ಟಿ, ಸಾಲ್ವೆಟೋಕ್ರೋಮಿಸಮ್ ಅಂಡ್ ಎನರ್ಜಿ ಟ್ರಾನ್ಸ್ಫರ್ ಸ್ಟಡೀಸ್ ಇನ್ ಸಮ್ ಬಯಲಾಜಿಕಲಿ ಆಕ್ಟೀವ್ ಆರ್ಗ್ಯಾನಿಕ್ ಫ್ಲೋರೊಸೆಂಟ್ ಮಾಲಿಕ್ಯೂಲ್ಸ್” ಎಂಬ ಪ್ರೌಢ ಪ್ರಬಂಧ ಮಂಡಿಸಿದ್ದಕ್ಕೆ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ಪ್ರದಾನ ಮಾಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















