ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದುಡಿಯುವ ಕೈಗಳಿಗೆ ಕೆಲಸ : ವಿಜಯ ಪಾಟೀಲ ಸ್ಪಷ್ಟನೆ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ “ವಿಶೇಷ ಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಣಾ ಅಭಿಯಾನ” ಕಾರ್ಯಕ್ರಮದ ಪ್ರಯುಕ್ತ ದೇಶನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಉದ್ಯೋಗ ಖಾತ್ರಿ ಕೆಲಸದ ಸ್ಥಳಕ್ಕೆ ಹಾಗೂ ವಿಶೇಷ ಚೇತನರ ಮನೆ ಮನೆಗೆ ಭೇಟಿ ನೀಡಿ ದುಡಿಯುವ ಕೈಗಳಿಗೆ ನರೇಗಾ ಜಾಬ್ ಕಾರ್ಡ್ ಆಧಾರವಾಗಿದೆ ಎಂದು ಸಹಾಯಕ ನಿರ್ದೇಶಕ ವಿಜಯ ಪಾಟೀಲ ರವರು ಚೇತನರಿಗೆ ವಿಶೇಷ ಜಾಬ್ ಕಾರ್ಡ್ ವಿತರಣೆ ಮಾಡಿ ತಿಳಿಸಿದರು.
ಮುಂದುವರೆದು ಪ್ರತಿ ಆರ್ಥಿಕ ವರ್ಷಕ್ಕೆ 100 ಮಾನವ ದಿನಗಳನ್ನು ಪ್ರತಿ ಅರ್ಹ ಕುಟುಂಬಗಳಿಗೆ ನರೇಗಾ ಯೋಜನೆಯಲ್ಲಿ ಲಭ್ಯವಿರುತ್ತವೆ ಆದ್ದರಿಂದ ನಿಮ್ಮ ಗ್ರಾಮದ ವಿಶೇಷ ಚೇತನರು ಸಹ ಈ ಅಭಿಯಾನದಲ್ಲಿ ನೊಂದಣಿ ಮಾಡಿಕೊಂಡು ಖಾತ್ರಿ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು ಇದರಿಂದ ಇವರಿಗೆ ವಾರ್ಷಿಕವಾಗಿ 37,000/- ರೂ. ಗಳ ಕೂಲಿ ಹಣವು ದೊರೆಯುತ್ತದೆ ಮತ್ತು ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ದೊರೆಯುತ್ತದೆ ಈ ಯೋಜನೆಯಲ್ಲಿ ಹೆಣ್ಣು-ಗಂಡು ಸಮಾನ ಕೂಲಿ 370/- ರೂಗಳನ್ನು ಪ್ರತಿ ಮಾನವ ದಿನಕ್ಕೆ ಪಡೆಯಬಹುದು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಲ್ಲಪ್ಪ ಬೋರಡ್ಡಿ, ಗ್ರಾಪಂ ಕಾರ್ಯದರ್ಶಿ ಮಹಾಂತೇಶ ಗಾಣಗಿ, ತಾ.ಪಂ ಐಇಸಿ ಸಂಯೋಜಕ ಎಸ್‌ ವ್ಹಿ ಹಿರೇಮಠ, ಗ್ರಾ.ಪಂ ಸಿಬ್ಬಂದಿಗಳು ಕುಮಾರ ಕೇಳಗಿನಮನಿ, ಬಸವರಾಜ್‌ ಕರಣೆವರ ರಂಗೋಜಿ ಕಂಚಿನಮರದ ಬೇರಪೂಟ ಟೆಕ್ನಿಶಿಯನ್ ಸಿದ್ರಾಮಯ್ಯ ಹಿರೇಮಠ, ಜಿಕೆಎಮ್‌ ಶಶಿಕಲಾ ತಳವಾರ ಮೇಟ ಮಂಜುಳಾ ಚಿಕ್ಕೆರೂರ ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು.

ವರದಿ : ಭೀಮಸೇನ ಕಮ್ಮಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!