ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಟಪನಹಳ್ಳಿಯ ಶ್ರೀ ಭೀಮಾಂಬಿಕಾ ದೇವಿಯ 28 ನೇ ವರ್ಷದ ಜಾತ್ರಾ ಮಹೋತ್ಸವ , ಪುರಾಣ ಮಹಾ ಮಂಗಳೋತ್ಸವ ಹಾಗೂ ಸಾಮೂಹಿಕ ವಿವಾಹಗಳು

ಕೊಪ್ಪಳ : ಜಿಲ್ಲೆಯ ಕುಕನೂರು ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕೆ ದೇವಿಯ ಮಠದಲ್ಲಿ ೨೮ ನೆಯ ವರ್ಷದ ಶ್ರೀ ಕಲ್ಲಿನಾಥ ಕವಿಗಳು ದ್ಯಾಂಪುರ ವಿರಚಿತ ಮಹಾ ಶಿವಶರಣೆ ಶ್ರೀ ಭೀಮಾಂಬಿಕಾ ದೇವಿಯ ಜಾತ್ರಾ ಮಹೋತ್ಸವ, ಪುರಾಣ ಮಹಾ ಮಂಗಲೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಏ.೨೮ ರಂದು ಸೋಮವಾರ ಬೆಳಿಗ್ಗೆ ೧೧.೩೦ ಗಂಟೆಗೆ ಜರುಗುವವು, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಗಳಾದ ಶಿರಟ್ಟಿಯ ಫಕೀರಸಿದ್ಧರಾಮ ಸ್ವಾಮೀಜಿ, ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಬೆದವಟ್ಟಿಯ ಶಿವಸಂಗಮೇಶ್ವರ ಸ್ವಾಮೀಜಿ, ಕುಕನೂರಿನ ಡಾ. ಮಹಾದೇವ ಸ್ವಾಮೀಜಿ, ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ, ಬಳಗಾನೂರಿನ ಶಿವಶಾಂತವೀರ ಶರಣರು, ತಿಂಥಣಿಯ ಸಿದ್ದರಾಮಾನಂದಪುರಿ ಸ್ವಾಮೀಜಿ, ಇಟಗಿಯ ಷಣ್ಮುಖಪ್ಪಜ್ಜನವರು ಹಾಗೂ ಸುತ್ತಮುತ್ತಲಿನ ಪೂಜ್ಯರು ಸಾನಿದ್ಯ ವಹಿಸುವರು. ಕಾಟ್ರಳ್ಳಿಯ ಶಾಂತವೀರಯ್ಯ ಶಾಸ್ತ್ರಿ ಪುರಾಣ ಪ್ರವಚನ ನೀಡುವರು, ಸಂಗೀತ ಬಳಗದ ಗವಾಯಿಗಳಾದ ಕಲಬರ್ಗಿಯ ಕುಮಾರ ಶಶಿಧರ ಗವಾಯಿಗಳು , ಕುರಹಟ್ಟಿಯ ಬಸವರಾಜ ಹುಯಿಲಗೋಳ ಇವರು ಸಂಗೀತ ಸೇವೆ ನೀಡುವರು. ಮಂಡಲಗಿರಿಯ ಸದಾಶಿವಯ್ಯ ಹಿರೇಮಠ, ಕುಕನೂರಿನ ವೀರುಪಾಕ್ಷಯ್ಯ ಗುರುವಿನ, ಮಂಡಲಗಿರಿಯ ಶಿವಶರಣಯ್ಯ ಹಿರೇಮಠ, ಹಾಗೂ ಭಟಪನಹಳ್ಳಿಯ ಭಾವಿಕಟ್ಟಿ ಕಟ್ಟಿಮನಿಯವರು ಮಾಂಗಲ್ಯ ಕಾರ್ಯದಲ್ಲಿ ಭಾಗವಹಿಸುವರು. ಏ.೨೦ ರೊಳಗೆ ವಿವಾಹ ಮಾಡ ಬಯಸುವರು ಸಮಿತಿಯವರಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು, ಬಾಲ್ಯ ವಿವಾಹ ಮರು ವಿವಾಹಕ್ಕೆ ಅವಕಾಶ ಇರುವುದಿಲ್ಲ, ಪುರಾಣ ಕಾರ್ಯಕ್ರಮದಲ್ಲಿ ಶ್ರೀ ಭೀಮಾಂಬಿಕಾದೇವಿ ತೋಟ್ಟಿಲ ಕಾರ್ಯಕ್ರಮ, ಮದುವೆ ಸೀಮಂತ ಕಾರ್ಯಕ್ರಮಗಳು ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ಸಾಗಿ ಬಂದಿರುತ್ತವೆ. ಕಾರ್ಯಕ್ರಮದಲ್ಲಿ ನಿವೃತ್ತ ಲೋಕಸೇವಾ ಅಧಿಕಾರಿ ಎಚ್.ಡಿ.ಪಾಟೀಲ , ಸಮಿತಿಯವರಾದ ಯಲ್ಲಪ್ಪ ದೇವರಳ್ಳಿ, ಪರಸಪ್ಪ ಹೊಸಮನಿ, ರಾಜಶೇಖರ ಕರಮುಡಿ, ಹಂಚ್ಯಾಲಪ್ಪ ಕಲ್ಗೋಡಿ, ವೀರಯ್ಯ ಭದ್ರಾಪೂರ, ಮಹೇಶ ದೊಡ್ಡಮನಿ, ಶರಣಪ್ಪ ಹಾದಿಮನಿ, ಮಲ್ಲಪ್ಪ ಗುಡಿಹಿಂದಲ, ಕಳಕೇಶ ಉದ್ದಾರ, ಬಸಪರಾಜ ಭಾವಿಕಟ್ಟಿ, ಮುದಿಯಪ್ಪ ಪೂಜಾರ,ಚೆನ್ನಪ್ಪ ವಾಲಿಕಾರ ,ಶರಣಬಸಪ್ಪ ದಾನಕೈ, ಯಲ್ಲಪ್ಪ ಪೊತುಂಡಿ,ವಿಜಯಕುಮಾರ ಕಾಗಿ, ಶ್ರೀಧರ ಹೊಸಮನಿ,ಹನುಮಪ್ಪ ಗಾಳಿ ಸೇರಿದಂತೆ ಇತರರು ಇದ್ದರು. ಪ್ರತಿ ನಿತ್ಯ ಅಮ್ಮನ ಜೀವನ ಚರಿತ್ರೆ, ಪವಾಡಗಳ ಕಾರ್ಯಕ್ರಮ ಸಾಗಿ ಬಂದು ಏ. ೨೮ ರಂದು ಸಂಜೆ ೫ ಗಂಟೆಗೆ ಶ್ರೀ ಭೀಮಾಂಬಿಕಾದೇವಿಯ ಲಘು ರಥೋತ್ಸವ ಜರುಗುವುದು. ರಾತ್ರಿ ೯.೩೦ ಗಂಟೆಗೆ ಸಾಮಾಜಿಕ ನಾಟಕ ದಿಲ್ಲಿ ಹೊಕ್ಕ ಪುಂಡ ಹುಲಿ ನಾಟಕವನ್ನು ಶ್ರೀ ಭೀಮಾಂಬಿಕಾ ನಾಟ್ಯ ಸಂಘದವರು ಅಭಿನಯಿಸುವರು ಎಂದು ಶ್ರೀ ಭೀಮಾಂಬಿಕಾ ದೇವಿಯ ಸರ್ವ ಸದ್ಭಕ್ತ ಮಂಡಳಿಯವರು ತಿಳಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ