ಯಾದಗಿರಿ/ಗುರುಮಠಕಲ್: ಪುಣೆಯ ಪ್ರತಿಷ್ಠಿತ ಕವಿ ಕುಲಗುರು ಕಾಳಿದಾಸ ಸಂಸ್ಕೃತ ವಿಶ್ವ ವಿದ್ಯಾನಿಲಯದಿಂದ ಗುರುಮಠಕಲ್ ಪಟ್ಟಣದ ಆರಾಧನಾ ಪಬ್ಲಿಕ್ ಶಾಲೆಯ ಸಂಸ್ಥಾಪಕರು ಹಾಗೂ ಶಿಕ್ಷಕರಾದ ವೇಣುಗೋಪಾಲ್ ದೇವನೂರು ಅವರಿಗೆ ಸಂಪ್ರದಾಯ ಮತ್ತು ಆಧುನಿಕತೆಯನ್ನು ಸಂಯೋಜಿಸುವುದು ಕೈಗಾರಿಕಾ ನಾಗರಿಕ ರಚನೆ ಮತ್ತು ವಿನ್ಯಾಸದ ಮೇಲೆ ವಾಸ್ತುಶಾಸ್ತ್ರದ ಪ್ರಭಾವವನ್ನು, ಪರಿಶೀಲಿಸುವುದು ಎನ್ನುವ ವಿಷಯಕ್ಕೆ ಪಿ.ಎಚ್.ಡಿ ಪದವಿ ಪ್ರಧಾನ ಮಾಡಲಾಗಿದೆ.
ಅವರ ಕುಟುಂಬದ ಸದಸ್ಯರು ಆರಾಧನಾ ಶಾಲೆಯ ಶಿಕ್ಷಕ ವೃಂದ ಹಾಗೂ ಮಕ್ಕಳು ಮತ್ತು ಗುರುಮಠಕಲ ಅವರ ಸ್ನೇಹಿತ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















