ಯಾದಗಿರಿ/ಗುರುಮಠಕಲ್: ನಿನ್ನೆ ಜೂ. 17 ರ ಸಾಯಂಕಾಲ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಪಸಪೂಲ್ ತಾಂಡಾದಲ್ಲಿ ಖಚಿತ ಮಾಹಿತಿ ಅಧಾರದ ಮೇಲೆ ಮೇಲಾಧಿಕಾರಿಗಳ ಮೌಖಿಕ ಅದೇಶದಂತೆ ಪರಿಶೀಲನೆ ಮಾಡಲು ತೆರಳಿದ್ದ ಪರಶುರಾಮ ತಂದೆ ದೇಸು ಚವ್ಹಾಣ, ಅಬಕಾರಿ ಪೇದೆ ಮತ್ತು ಗೃಹ ರಕ್ಷಕ ಸಿಬ್ಬಂದಿಯಾದ ಭೀಮರಾಯ ತಂದೆ ಲಚಮಪ್ಪ ಕಣ್ಣೀರ ಆಶಾಪೂರ ಎನ್ನುವವರ ಮೇಲೆ ಹಲ್ಲೆ ಮಾಡಲಾಗಿದೆ.
ಕಳ್ಳಭಟ್ಟಿ ಸರಾಯಿ ತಯಾರಿ ಹಾಗೂ ಮಾರಾಟ ಮಾಡುತ್ತಿರುವ ಕುರಿತು ಆರೋಪಿ ಶಂಕ್ರಿಬಾಯಿ ಮನೆಗೆ ಪರಿಶೀಲನೆಗೆ ಹೋದ ಸಮಯದಲ್ಲಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಇಬ್ಬರ ಮೇಲೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ನಮೂದಿಸಲಾಗಿದೆ.
ಹಲ್ಲೆಗೆ ಸಂಭಂದಿಸಿದ ಹಾಗೆ ಹಲ್ಲೆ ಮಾಡಿದ ಶಂಕ್ರಿಬಾಯಿ, ನಿಂಗಪ್ಪ, ಮೊಹನ್, ಸೋಮ್ಲಾ, ಶಾಂತಿಬಾಯಿ, ಬೀಚಿಬಾಯಿ ಎಂಬ 6 ಜನರ ಮೇಲೆ ಪ್ರಕರಣ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಳ್ಳಭಟ್ಟಿ ಸಾರಾಯಿ ತಯಾರಿಕೆ ಮತ್ತು ಮಾರಾಟ ಕಾನೂನು ಬಾಹಿರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ, ಈ ಹಿನ್ನೆಲೆಯಲ್ಲಿ, ಪೊಲೀಸರು ಅಂತಹ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವುದು, ದಾಳಿ ಮಾಡಿ ಕಳ್ಳಭಟ್ಟಿ ಸಾರಾಯಿ ಮತ್ತು ಅದನ್ನು ತಯಾರಿಸಲು ಬಳಸುವ ವಸ್ತುಗಳನ್ನು ವಶಪಡಿಸಿಕೊಳ್ಳುವಿಕೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಅಬಕಾರಿ ಇಲಾಖೆಯ ಅಧಿಕಾರಿಗಳ ಕರ್ತವ್ಯವಾಗಿದೆ ವಿಪರ್ಯಾಸವೆನ್ನುವಂತೆ ಅಧಿಕಾರಿ/ಪೇದೆಗಳ ಮೇಲೆ ಈ ರೀತಿಯ ಹಲ್ಲೆ ಕಾನೂನಿನ ಕುರಿತಾದ ಅರಿವು ಭಯ ಇಲ್ಲದಿರುವದು ಕಾಣಬರುತ್ತದೆ.
ವರದಿ: ಜಗದೀಶ್ ಕುಮಾರ್ ಭೂಮಾ



















