
ಬೆಳಗಾವಿ :ಸೈದ್ದಾಂತಿಕ ಬದ್ಧತೆ, ಜನಪರ ಕಾಳಜಿ, ಸತ್ಯನಿಷ್ಠುರತೆ, ದೇಶದ ಭವಿಷ್ಯದ ಬಗೆಗಿನ ಸ್ಪಷ್ಟಮುನ್ನೋಟ, ಅಪಾರ ಧೈರ್ಯ ಮತ್ತು ಪ್ರೀತಿಯನ್ನು ತುಂಬಿಕೊಂಡ ಮತ್ತು ಸಂಸದರಾದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಜನ್ಮದಿನಾಚರಣೆ ಅಂಗವಾಗಿ ಶಿವಯೋಗಿ ನಗರದ ಮೋಟಗಿ ತೋಟದ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅಥಣಿಯ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನೋಟ್ ಬುಕ್ ವಿತರಣೆ ಮಾಡಿಲಾಯಿತು.
ಈ ವೇಳೆ ಯುವ ಉದ್ಯಮಿದಾರರಾದ ಹಾಗೂ ಕಾಂಗ್ರೆಸ್ಸಿನ ಯುವ ನಾಯಕರಾದ ಸಚಿನ್ ಬುಟಾಳಿ
ಅವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶಿವಯೋಗಿ ನಗರದ ಮುಖ್ಯ ಗಣ್ಯ ವ್ಯಕ್ತಿಗಳು ಮತ್ತು ಕನ್ನಡ ಪ್ರಾಥಮಿಕ ಶಾಲೆಯ ಗುರುಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ವರದಿ ವಿಠ್ಠಲ ಖೋಕಾಟೆ ಅಥಣಿ



















