ಬಳ್ಳಾರಿ / ಕಂಪ್ಲಿ : ಪತಂಜಲಿ ಯೋಗ ಸಮಿತಿಯಿಂದ ಜೂ.21ರ ಶನಿವಾರದಂದು ಸ್ಥಳೀಯ ಶಾರದಾ ಶಾಲೆ ಆವರಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರಿ ಡಿ. ಮೌನೇಶ ತಿಳಿಸಿದರು.
ಅವರು ಗುರುವಾರ ಪಟ್ಟಣದಲ್ಲಿ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, ಅಂತರಾಷ್ಟ್ರೀಯ ಯೋಗ ದಿನದಂದು ಬೆಳಿಗ್ಗೆ 5:30ರಿಂದ 7ಗಂಟೆವರೆಗೆ ಯೋಗ, ಧ್ಯಾನ, ಪ್ರಾಣಾಯಾಮ ನಡೆಯಲಿದ್ದು, ಯೋಗ ಸಾಧಕರಾದ ಬಾಲಚಂದ್ರ ಶರ್ಮ ಇವರು ನಡೆಸಿಕೊಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಶಾಸಕ ಜೆ.ಎನ್.ಗಣೇಶ ಭಾಗವಹಿಸಲಿದ್ದಾರೆ, ಅತಿಥಿಯಾಗಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಸೇರಿದಂತೆ ಹಲವು ಪಾಲ್ಗೊಳ್ಳಲಿದ್ದಾರೆ. ಜೂ.20ರಂದು ಸಂಜೆ ಸೈಕಲ್ ಮೋಟರ್ ಜಾಥಾ ಕಾರ್ಯಕ್ರಮವು ಶ್ರೀರಾಮ ದೇವಸ್ಥಾನದಿಂದ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಟಿ. ಕೊಟ್ರೇಶ, ಕಾರ್ಯದರ್ಶಿ ಎಸ್.ಜಿ. ಚಿತ್ರಗಾರ್ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















