ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯೋಗ ಎನ್ನುವುದು ನಿನ್ನೆ, ಮೊನ್ನೆ ಹುಟ್ಟಿಕೊಂಡ ಸಾಧನೆಯಲ್ಲ: ಸಿದ್ದು ಕಾಂಬಳೆ

ವಿಜಯಪುರ/ ಇಂಡಿ : ಯೋಗದ ಮಹತ್ವವನ್ನು ಪ್ರಪಂಚಕ್ಕೆ ಸಾರುವುದಕ್ಕಾಗಿ ಪ್ರತಿ ವರ್ಷ ಜೂನ್‌ 21 ರಂದು ಯೋಗ ದಿನಾಚರಣೆಯನ್ನು ಆಚರಿಸಲಾಗುವುದು. ಯೋಗ ಎನ್ನುವುದು ನಿನ್ನೆ, ಮೊನ್ನೆ ಹುಟ್ಟಿಕೊಂಡ ಸಾಧನೆಯಲ್ಲ ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಯೋಗ ಹಿಂದೂ ಧರ್ಮದೊಂದಿಗೆ ಸಂಬಂಧವನ್ನು ಹೊಂದಿದೆ. ಯೋಗಕ್ಕೂ ಹಿಂದೂ ಧರ್ಮಕ್ಕೂ ಇರುವ ಸಂಬಂಧವೇನು.? ಯೋಗ ಹಿಂದೂ ಧರ್ಮದಿಂದ ಹುಟ್ಟಿಕೊಂಡಿದ್ದು ಹೇಗೆ.? ಸಕ್ಸಸ್ ಶಾಲೆಯ ಆಡಳಿತ ಅಧಿಕಾರಿ ಆದ ಸಿದ್ದು ಕಾಂಬಳೆ ಮಾತನಾಡಿದರು.

ಪ್ರತೀ ವರ್ಷದಂತೆ ಈ ವರ್ಷವೂ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು, 2025ರ ಯೋಗ ದಿನಾಚರಣೆಯನ್ನು ಜೂನ್‌ 21 ರಂದು ಶನಿವಾರದ ದಿನದಂದು ಆಚರಿಸಲಾಗುತ್ತಿದೆ. ಯೋಗವು ಶಿವನೊಂದಿಗೆ ಹುಟ್ಟಿಕೊಂಡಿತು ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಶಿವನಿಂದಾಗಿ ಸಪ್ತ ಋಷಿಗಳು ಯೋಗವನ್ನು ಅನುಸರಿಸಿಕೊಂಡು ಬಂದರು. ಪ್ರಸ್ತುತ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ನಾವು ಯೋಗವನ್ನು ಉತ್ತಮ ಆರೋಗ್ಯಕ್ಕಾಗಿ, ದೀರ್ಘಾಯುಷ್ಯಕ್ಕಾಗಿ ಮಾಡುತ್ತಿದ್ದೇವೆ. ಆದರೆ, ಹಿಂದೆಲ್ಲಾ ಜನರು ದೇವರನ್ನು ಧ್ಯಾನಿಸುವುದಕ್ಕಾಗಿ ಯೋಗವನ್ನು ಪಾಲಿಸುತ್ತಿದ್ದಾರೆ. ಸನಾತನ ಧರ್ಮದೊಂದಿಗೆ ಸಂಬಂಧವನ್ನು ಹೊಂದಿರುವ ಯೋಗವು ಸಾವಿರಾರು ವರ್ಷಗಳ ಐತಿಹ್ಯವನ್ನು ಹೊಂದಿದೆ ಎಂದರು. ಈ ಒಂದು ಯೋಗ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಆದ ಜ್ಯೋತಿ ಸನತ ತೃಪ್ತಿ ಚಾಬಕಸವಾರ ಮುಖ್ಯ ಶಿಕ್ಷಕರು ಚೈತನ್ಯ ರೇವುರಕರ ಅವರು ಯೋಗವನ್ನು ನಡೆಸಿಕೊಟ್ಟರು. ಹಾಗೂ ಸಕ್ಸಸ್ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ವರದಿ. ಅರವಿಂದ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!