
ಯಾದಗಿರಿ/ಗುರುಮಠಕಲ್: ಗುರುಮಠಕಲ್ ಹೊಸ ತಾಲೂಕುಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡು ಏಳು ವರ್ಷ ಕಳೆದಿದೆ, ಇನ್ನೂ ತಾಲೂಕಿಗೆ ಸಿಗಬೇಕಾದ ಸ್ಥಾನಮಾನ ಸಿಗುವಲ್ಲಿ ವಂಚಿತವಾಗಿದೆ, ಬಹುದಿನಗಳಿಂದ ಬೇಡಿಕೆಯಾಗಿರುವ ಗುರುಮಠಕಲ್ ತಾಲೂಕಿಗೆ ಪ್ರಸ್ತಾವಿತ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಸ್ಥಾಪನೆಗೆ ಸಂಬಂಧಿಸಿದಂತೆ ಮರುಳಸಿದ್ದಾರಾಧ್ಯ ಹೆಚ್ ಜೆ-ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಪಟ್ಟಣದ ಟೌನ್ ಹಾಲ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ ಅಡಿಯಲ್ಲಿ 189.18 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಟೌನ್ ಹಾಲ್ 2021 ರಲ್ಲಿ ದಿ. ನಾಗನಗೌಡ ಕಂದಕೂರ ಮಾಜಿ ಶಾಸಕರು ಗುರುಮಠಕಲ್ ಮತಕ್ಷೇತ್ರ ಅವರಿಂದ ಉದ್ಘಾಟನೆ ಭಾಗ್ಯ ಕಂಡರೂ ಇಲ್ಲಿಯವರೆಗೆ ಯಾವುದೇ ಕಚೇರಿಗೆ ಉಪಯೋಗವಾಗದೆ ಈಗಲಾದರೂ ಉಪಯೋಗವಾದರೆ ಒಳ್ಳೆಯದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಈ ಸಂದರ್ಭದಲ್ಲಿ ಪರಶುರಾಮ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಉಪವಿಭಾಗ, ಯಾದಗಿರಿ. C.s. ಮಾಲಿ ಪಾಟೀಲ ಅಧ್ಯಕ್ಷರು ಮತ್ತು ಎಮ್. ಡಿ. ಗೌಸ್ ಉಪಾಧ್ಯಕ್ಷ, ರಾಜು ದೊಡಮನಿ ಕಾರ್ಯದರ್ಶಿ, ಸಾಬಣ್ಣ ಪಾಟೀಲ ಖಜಾಂಚಿ, ರಾಜ ರಮೇಶ್ ಗೌಡ, ಮೋಹನ ಮತ್ತು ಪದಾಧಿಕಾರಿಗಳು, ವಕೀಲರ ಸಂಘ, ಯಾದಗಿರಿ. ಶಾಂತ ಗೌಡ ಬಿರಾದಾರ ತಹಶೀಲ್ದಾರ್, ಗುರುಮಠಕಲ,ಶ್ರೀಮತಿ ಜಯಶ್ರೀ ಪುರಸಭೆಯ ಅಧ್ಯಕ್ಷರು ಹಾಗೂ ಸಿಬ್ಬಂದಿ ಗುರುಮಠಕಲ್ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















