ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕದಂಬ ಮರ : ಪುರಾಣದೊಳಗೆ ಅರಸಿನ ತೇಗದ ಕಥೆ

ಸಸ್ಯಾಸಕ್ತ ಮಿತ್ರ ರಮೇಶ್ ಎ. ಎಸ್. ಅವರ ಊರಾದ ಕಯ್ಯಾರು ಅಟ್ಟೆಗೋಳಿಯಲ್ಲಿ ಈ ಮರ  ಬೃಹದಾಕಾರವಾಗಿ ಬೆಳೆದುನಿಂತು ಹೀಗೆ ರಾರಾಜಿಸುತಿತ್ತು ( ವಿಷಯ ಸ್ಪಷ್ಟತೆಗಾಗಿ ಹೂವಿನ ಚಿತ್ರ ಮಾತ್ರ ಅಂತರ್ಜಾಲದಿಂದ ).

ಕದಂಬ ಮರದ ಹೂವಿನ ಹೋಲಿಕೆ ಇರುವ ಹಲವು ಮರಗಳು ನಮ್ಮ ಕರಾವಳಿ, ಪಶ್ಚಿಮ ಘಟ್ಟ, ಮಲೆನಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ. 14,000 ಸಸ್ಯ ಜಾತಿಗಳು ಮತ್ತು 580 ಸಸ್ಯ ಕುಲಗಲಿರುವ ಬಹುದೊಡ್ಡ ಸಸ್ಯ ಕುಟುಂಬವಾದ Rubiaceae ಎಂಬ ಕುಟುಂಬಕ್ಕೆ ಇವೆಲ್ಲಾ ಸೇರಿದೆ.

ಮೇಲ್ನೋಟಕ್ಕೆ ಒಂದೇ ರೀತಿ ಕಾಣುವ ಹೂವಿನಿಂದಾಗಿ ನಾವು ಹಲವು ಮರಗಳನ್ನು ಕದಂಬ ಎಂದು ಕರೆದು ಗೊಂದಲಗೊಳಿಸುತ್ತೇವೆ.

ನದಿ ದಡದಲ್ಲಿ… ಹೊಳೆ ಬದಿಯಲ್ಲಿ Ochreinauclea missionis ಎಂಬ ಮರ ಬೆಳೆಯುತ್ತದೆ. ಇದು ಜಲ ಕದಂಬ ಅಥವಾ ನದಿ ಕದಂಬ., ತುಳುವಿನಲ್ಲಿ ಸುದೆ ಕದಂಬ.

ಗುಡ್ಡ ಕಾಡುಗಳಲ್ಲಿ Mitragyna parvifolia ಎಂಬ ಮರ ಬೆಳೆಯುತ್ತದೆ. ಕನ್ನಡದಲ್ಲಿ ಇದಕ್ಕೆ ಕೊಂಗು ಅಥವಾ ನಾಯಿಕದಂಬ ಎನ್ನುತ್ತಾರೆ., ತುಳುವಿನಲ್ಲಿ ನಾಯಿಕದಂಬ.

ನಮ್ಮ ಪುರಾಣಗಳಲ್ಲಿ ಕದಂಬ ಎಂದು ಉಲ್ಲೇಖಿಸಲ್ಪಟ್ಟು ಧಾರ್ಮಿಕ ಮಹತ್ವ ಪಡೆದ ಕದಂಬ ಮರ ಅಂದರೆ Neolamarckia cadamba. ಇದು ತೇವವಿರುವ ಪ್ರದೇಶದಲ್ಲಿ ಬೆಳೆಯುತ್ತದೆ ಆದರೆ ನೋಡಸಿಗುವುದು ಅಪರೂಪ. ಇದರ ವೈಜ್ಞಾನಿಕ ಹೆಸರಲ್ಲೂ ಕದಂಬ ಇದೆ ಮತ್ತು ಇಂಗ್ಲೀಷ್ ಸೇರಿದಂತೆ ಹೆಚ್ಚಿನ ಎಲ್ಲಾ ಭಾರತೀಯ ಭಾಷೆಗಳಲ್ಲಿ ಇದಕ್ಕೆ ಕದಂಬ ಎಂದೇ ಹೆಸರು.

ಮತ್ತೇ ಈಗ ನಾವು ಮಿತ್ರ ರಮೇಶಣ್ಣನ ಅಟ್ಟೆಗೋಳಿಯಲ್ಲಿರುವ ಇರುವ ಮರದ ವಿಷಯಕ್ಕೆ ಬರೋಣ. ಇದರ ಹೂವು ಸಹ ಕದಂಬದ ಹಾಗೇ…

ವೈಜ್ಞಾನಿಕ ಹೆಸರು: Haldina cordifolia

ಕುಟುಂಬ : Rubiaceae

ಇಂಗ್ಲೀಷ್ : Haldu

ಸಂಸ್ಕೃತ: ಧಾರಾ ಕದಂಬ, ಗಿರಿ ಕದಂಬ

ಕನ್ನಡ : ಅರಸಿನ ತೇಗ ಅನವು

ತುಳು : ಅನವು, ಅನೊವು

ಇದೊಂದು ಅತ್ಯುತ್ತಮ ನಾಟಾ ಮರ.  Haldina cordifolia ಎಂಬ ಇದರ ವೈಜ್ಞಾನಿಕ ಹೆಸರಿನಲ್ಲಿರುವ haldina ಪದ ಹಿಂದಿ ಭಾಷಾ ಮೂಲದ್ದು ಹಳದಿ ಎಂಬರ್ಥದಿಂದ. Cordifolia ಎನ್ನುವುದು ಲಾಟಿನ್ ಮೂಲದ ಪದವಾದ cord ನಿಂದ ಬಂದಿದೆ. Cord ಅಂದರೆ ಹೃದಯ., ಇದರ ಎಲೆ ಹೃದಯಕಾರದಲ್ಲಿದೆ.ಅನವು ಎಂಬ ತುಳು ಹೆಸರಿನ ಮೂಲ ಗೊತ್ತಾಗಲಿಲ್ಲ. ಗೊತ್ತಿದ್ದವರು ತಿಳಿಸಿ.

ಜನಪದ ವೈದ್ಯದಲ್ಲಿ ಅನವು ಮರದ ಔಷಧೀಯ ಅರಿವು ಈ ರೀತಿ ಇದೆ.

ಗಾಯ ಮತ್ತು ವೃಣಗಳನ್ನು ವಾಸಿಮಾಡುವ ತನ್ನ ಗುಣದಿಂದ ಅನವು ಮರ ಜನಪದ ವೈದ್ಯದಲ್ಲಿ ಪ್ರಾಮುಖ್ಯತೆ ಪಡೆದಿದೆ.

ಇದರ ಚಿಗುರೆಲೆಯಿಂದ ತಯಾರಿಸಿದ ಎಣ್ಣೆಯನ್ನು ಗಾಯ ಮತ್ತು ವೃಣಗಳಿಗೆ ಹಚ್ಚುವುದು ಗುಣಕಾರಿ.

ಅನವು ಮರದ ತೊಗಟೆ ಮತ್ತು ಎಲೆಯನ್ನು ನುಣ್ಣಗೆ ಅರೆದು ಗಾಯಗಳಿಗೆ ಹಚ್ಚಿದರೆ ಗಾಯ ಬೇಗ ವಾಸಿಯಾಗುವುದು.

ಕಿವಿಯಲ್ಲಿ ಕೀವಾದಾಗ ಇದರ ಚಿಗುರಿನ ಎಣ್ಣೆಯನ್ನು ಕಿವಿಗೆ ಬಿಡುವುದು.

ಯಕೃತ್ತು ಮತ್ತು ಪಿತ್ತ ರಸದ ( bile and liver ) ತೊಂದರೆಗಳಿಗೆ ಈ ಮರದ ತೊಗಟೆಯ ಕಷಾಯ ಪರಿಹಾರಕ.

✍️ ಸುರೇಶ್ ರಾಜ್ ಭಟ್ ಕೋಡು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!