ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮತ್ತು ವಿಕಲಚೇತನರಿಗೆ ತ್ರೀ ವೀಲರ್ ವಿತರಣಾ ಸಮಾರಂಭ

ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ದಿ. 21/06.2025 ರಂದು ಸಿಂದಗಿಯ ಜನಪ್ರಿಯ ಶಾಸಕರಾದ ಅಶೋಕ್ ಮನಗೂಳಿಯವರಿಂದ ವಿಕಲಚೇತನರಿಗೆ ಥ್ರೀ ವೀಲರ್ ವಿತರಣೆ ನಂತರ ತಹಶೀಲ್ದಾರ್ ಕಚೇರಿ ಹತ್ತಿರ ಇರುವ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಸರಕಾರದಿಂದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್ ಟ್ಯಾಪ್ ನೀಡಿ ಮಾತನಾಡಿ ಭವ್ಯವಾದ ಪ್ರಜಾಸೌಧ ಕಟ್ಟುವ ನಿಟ್ಟಿನಲ್ಲಿ ಅಡಿಗಲ್ಲು ಸಮಾರಂಭ ಆಲಮೇಲ ಪಟ್ಟಣದಲ್ಲಿ ನೆರವೇರಿಸುತ್ತೇನೆ ಎಂದು ಹೇಳಿದರು.
ಈ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಆಲಮೇಲ ಹಿರೇಮಠದ ಶ್ರೀ ಚಂದ್ರಶೇಖರ್ ಶಿವಾಚಾರ್ಯರು, ಹಾಗೂ ಅಳ್ಳೊಳ್ಳಿ ಮಠದ ಶ್ರೀಗಳಾದ ಶ್ರೀಶೈಲಯ್ಯ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಲಮೇಲ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಸಾಧಿಕ್ ಸುಂಭಡ ಅವರು ಈ ಇಂದಿರಾ ಕ್ಯಾಂಟೀನ್ ಯಾವುದೇ ಜಾತಿ ಧರ್ಮ ಪಕ್ಷಗಳಿಗೆ ಮೀಸಲಿರುವುದಿಲ್ಲ ಎಂದು ಹೇಳಿದರು.
ಆಲಮೇಲ ತಾಲೂಕು ದಂಡಾಧಿಕಾರಿಗಳಾದ ಕೆ. ವಿಜಯಕುಮಾರ ಮಾತನಾಡಿ ಇದು ಬಡವರ ಕ್ಯಾಂಟೀನ್ ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಈ ಸಮಾರಂಭದಲ್ಲಿ ಆಲಮೇಲ ಪಟ್ಟಣ ಪಂಚಾಯ್ತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಸುರೇಶ ನಾಯಕ ಹಾಗೂ ಸಿಬ್ಬಂದಿ ವರ್ಗ, ಆಲಮೇಲ ತಾಲೂಕು ಪಂಚಾಯಿತಿ EO ರಾಮು ಅಗ್ನಿ, ಶೋಭಾ ಮುದುಗಲ, ಎಪಿಎಂಸಿ ಅಧ್ಯಕ್ಷರಾದ ಬಸವರಾಜ್ ಬಾಗೇವಾಡಿ ಹಾಗೂ ಎಪಿಎಂಸಿಯ ಸರ್ವ ಸದಸ್ಯರು, ಕೆಡಿಪಿ ಅಧ್ಯಕ್ಷ ನೂರ್ ಅಹ್ಮದ್ ಅತ್ತಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕೋಳಾರಿ ಮತ್ತು ಗ್ಯಾರಂಟಿ ಸಮಿತಿ ಸರ್ವ ಸದಸ್ಯರು, ಆಲಮೇಲ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗ, ಆಲಮೇಲ ಠಾಣೆಯ ಪಿ ಎಸ್ ಐ ಅರವಿಂದ್ ಅಂಗಡಿ ಹಾಗೂ ಸಿಬ್ಬಂದಿ ವರ್ಗ, ಮತ್ತು ಆಲಮೇಲ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಯುವಕರು, ರಾಜಕೀಯ ಮುಖಂಡರು ಭಾಗಿಯಾಗಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ರಮೇಶ್ ಬಂಟನೂರ್ ಮತ್ತು ಪುಂಡಲಿಕ್ j.e ನಡೆಸಿಕೊಟ್ಟರು.

ವರದಿ.ಹಣಮಂತ ಚ. ಕಟಬರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!