ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲ್ಲೂಕು ಬಾಳೆಹೊನ್ನೂರು ರಸ್ತೆಯಲ್ಲಿ ಬೈಕಿನಲ್ಲಿ ಬಂದ ಕಳ್ಳರು ಮಹಿಳೆಯ ಕುತ್ತಿಗೆಯಲ್ಲಿ ಇದ್ದ 38 ಗ್ರಾ೦ ಚಿನ್ನದ ಸರ, ಸರಿ ಸುಮಾರು ಮೂರೂವರೆ ಲಕ್ಷ ಬೆಲೆ ಬಾಳುವ ಸರ ಕದ್ದು ಪರಾರಿ ಆಗಿದ್ದರು. ಈ ಸಂಬಂಧ ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಸಂಬಂಧ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿ ಕಳ್ಳರಿಗೆ ಬಲೆ ಬೀಸಿದ್ದರು. ಭದ್ರಾವತಿ ಹಾಗೂ ಸಾಗರದಲ್ಲಿ ರಾಕೇಶ್ ಹಾಗೂ ಸಾಗರ್ ಎಂಬ ಆರೋಪಿಗಳನ್ನು ಬಂಧಿಸಿದರು. ಆರೋಪಿಗಳು ಸರ ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದಾರೆ. ಹಾಗೂ ತೀವ್ರ ವಿಚಾರೆಣೆಗೆ ಒಳಪಡಿಸಿದಾಗ ಆರೋಪಿಗಳು ದಕ್ಷಿಣ ಕನ್ನಡ ,ಉಡುಪಿ , ಹಾಸನ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸರಗಳ್ಳತನ ಪ್ರಕ್ರಣ ನಡೆಸಿದ್ದಾರೆ. ಕಳ್ಳರು ಬಳಸಿದ್ದ ಬೈಕು ಕುರಿತು ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಾಗಿದೆ. ಪೊಲೀಸರು 38ಗ್ರಾ೦. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ . ಕಳ್ಳರನ್ನು ಪತ್ತೆ ಹಚ್ಚಿದ ಎನ್ ಆರ್ ಪುರ ಪೊಲೀಸರಿಗೆ ವಿಶೇಷ ಶ್ಲಾಘನೆ ವ್ಯಕ್ತವಾಗಿದೆ.
ವರದಿ: ಪ್ರಸಾದ್ ಹೆಚ್ ಬಿ, ತೀರ್ಥಹಳ್ಳಿ



















