ಬಳ್ಳಾರಿ / ಕಂಪ್ಲಿ : ನಾಡಿನ ನೆಲ, ಜಲ, ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರದೊಂದಿಗೆ ಕರವೇ ಕಾರ್ಯಕರ್ತರು ಮುಂದಾಗಬೇಕು. ಜವಾಬ್ದಾರಿಯುತವಾಗಿ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಜನತೆಗೆ ತಲುಪಿಸಲು ಸಾಧ್ಯ ಎಂದು ಕರವೇ ರಾಜ್ಯ ಸಂಚಾಲಕ ಅದ್ದಿಗೇರಿ ರಾಮಣ್ಣ ಹೇಳಿದರು.
ಪಟ್ಟಣದ ಅತಿಥಿ ಗೃಹದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಘಟನಾ ಸಭೆ ಹಾಗೂ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ದಿನಮಾನದಲ್ಲಿ ಕನ್ನಡಕ್ಕೆ ದಕ್ಕೆ ಇದೆ. ಆದ್ದರಿಂದ ಕರವೇ ಕಾರ್ಯಕರ್ತರು ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಕನ್ನಡತನವನ್ನು ಮೇರು ಮಟ್ಟಕ್ಕೆ ಕೊಂಡೊಯ್ಯಬೇಕು. ಕನ್ನಡದ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಹೋರಾಟಗಾರರು ಸ್ಥಗಿತವಾಗದೇ ನಿರಂತರವಾಗಿ ಸಮಾಜ ಸೇವಾ ಕಾರ್ಯಗಳನ್ನು ಕೆಲಸ ಮಾಡಬೇಕು ಎಂದರು.
ನಂತರ ಜಿಲ್ಲಾಧ್ಯಕ್ಷ ಹೆಚ್.ಹುಲುಗಪ್ಪ ಮಾತನಾಡಿ, ಕರವೇ ಕಾರ್ಯಕರ್ತರು ಪ್ರತಿಯೊಬ್ಬರಲ್ಲಿ ಕನ್ನಡಾಭಿಮಾನವನ್ನು ಬೆಳೆಸಬೇಕು. ನಾಡಿನ ನೆಲ, ಜಲ, ಭಾಷೆ ಸಂರಕ್ಷಣೆಗೆ ಕಂಕಣ ಬದ್ಧರಾಗಿ ನಿಲ್ಲುವ ಜತೆಗೆ ತಾಲೂಕು ಮಟ್ಟದಲ್ಲಿರುವ ಜನರ ಸಮಸ್ಯೆಗಳನ್ನು ಆಲಿಸಿ, ಹೋರಾಟದ ಮೂಲಕ ಈಡೇರಿಸುವ ಕೆಲಸವಾಗಬೇಕು ಎಂದರು.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ ಶೆಟ್ಟಿ ಬಣ) ಯ ಕಂಪ್ಲಿ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರನ್ನಾಗಿ ವೆಂಕಟರಮಣ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕೆ.ಎಸ್.ಚಾಂದ್ ಬಾಷಾ, ಹೂಗಾರ ರಮೇಶ, ಜಿಲ್ಲಾ ಸಂಚಾಲಕರಾಗಿ ಬಿ.ರಮೇಶ, ಮುಖಂಡರಾದ ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಜಿ.ರಾಮಣ್ಣ, ಕೆ.ಷಣ್ಮುಕಪ್ಪ, ಭಾಸ್ಕರ್‌ರೆಡ್ಡಿ, ಬಿ.ದೇವೇಂದ್ರ, ಶೇಕ್ಷಾವಲಿ, ಬಿ.ನಾಗೇಂದ್ರ, ಬಳ್ಳಾಪುರ ವಿ.ಮೌನೇಶ, ತಿಪ್ಪೇಸ್ವಾಮಿ, ಗೋಪಾಲ, ಬಿ.ಕೆ.ವಿರುಪಾಕ್ಷಿ, ನಾಗರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















