ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭ್ರಷ್ಟಾಚಾರ ತಡೆಗಟ್ಟಬೇಕೆಂದು ರಾಜ್ಯಪಾಲರಿಗೆ ಬಹುಜನ ಸಮಾಜ ಪಕ್ಷ ವತಿಯಿಂದ ಮನವಿ ಪತ್ರ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಹಶೀಲ್ದಾರ ಕಛೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಬೇಕೆಂದು ಮಾನ್ಯ ಸಹಾಯಕ ಆಯುಕ್ತರು ಉಪ ವಿಭಾಗ ಬಸವಕಲ್ಯಾಣ ಇವರ ಮುಖಾಂತರ ಬಹುಜನ ಸಮಾಜ ಪಕ್ಷ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತಹಶೀಲ್ದಾರ ಕಛೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಇದರಿಂದ ಸಾರ್ವಜನಿಕರ ಹಾಗೂ ರೈತರ ಕೆಲಸಗಳು ಕೆಂಗಟ್ಟಿ ಹೋಗಿರುತ್ತವೆ. ದಿನನಿತ್ಯ ಅವರ ಪಾಡು ನಾಯಿ ಪಾಡಿಗಿಂತ ಕಡೆಯಾಗಿರುತ್ತದೆ. ಇದಕ್ಕೆ ತಾಲೂಕಾ ಆಡಳಿತ ಹಾಗೂ ಶಾಸಕರ ಮತ್ತು ರಾಜಕಾರಣಿಗಳ ಕಾರ್ಯ ವೈಫಲ್ಯವೇ ಕಾರಣವಾಗಿರುತ್ತದೆ ಇದನ್ನು ತಡೆಗಟ್ಟುವುದು ತೀರಾ ಅವಶ್ಯಕವಿದ್ದು, ಈ ಭ್ರಷ್ಟಾಚಾರದ ಮೂಲ ಬೇರು ಯಾರ ಕೈಯಲ್ಲಿ ಇರುತ್ತದೆ ಎಂಬುವುದನ್ನು ಸ್ಪಷ್ಟವಾಗಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ತಿಳಿದು ಬರುತ್ತಿಲ್ಲ. ಇದೇ ರೀತಿ ಭ್ರಷ್ಟಾಚಾರ ಮುಂದುವರೆಯುತ್ತಾ ಹೋದರೆ, ತಾಲೂಕಾ ಆಡಳಿತದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ ನಾವು ಈಗಾಗಲೇ ನಮ್ಮ ಬಹುಜನ ಸಮಾಜ ಪಕ್ಷದ ವತಿಯಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪ್ರಯತ್ನ ಮಾಡಿದರೂ ಏನೂ ಪ್ರಯೋಜನವಾಗಿರುವುದಿಲ್ಲ
ತಾವುಗಳು ಇದಕ್ಕೆ ಒಂದು ಗತಿ ‘ ತೋರಿಸಿ ಭ್ರಷ್ಟಾಚಾರ ನಿರ್ಮೂನೆ ಮಾಡಿ ಭ್ರಷ್ಟ ತಾಲೂಕಾ ಆಡಳಿತ ಹಾಗೂ ಶಾಸಕರು ಮತ್ತು ರಾಜಕಾರಣಿಗಳ ಕುಮ್ಮಕ್ಕನ್ನು ತಡೆ ಹಿಡಿದು ಸುಗಮ ದಾರಿಗೆ ಎಡೆಮಾಡಿಕೊಡಬೇಕೆಂದು ಕೋರುತ್ತಾ ಒಂದು ವೇಳೆ ಇದೇ ರೀತಿ ಭ್ರಷ್ಟಾಚಾರ ಮುಂದುವರೆಯುತ್ತಾ ಹೋದರೆ ನಾವುಗಳು, ತಾಲೂಕಾ ಆಡಳಿತ ಕಛೇರಿಯಲ್ಲಿ ಉಗ್ರ ಹೋರಾಟ ಮಾಡುತ್ತೇವೆಂದು ಬಹುಜನ ಸಮಾಜ ಪಕ್ಷದ ವತಿಯಿಂದ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಮುಕುಲ್‌ ಜೈನ್‌ ರವರ ಮುಖಾಂತರ ಕರ್ನಾಟಕದ ರಾಜ್ಯಪಾಲರಿಗೆ ಮನವಿ ಪತ್ರ ಕಳುಹಿಸಲಾಯಿತು.
ಈ ಸಂಧರ್ಭದಲ್ಲಿ ಶಂಕರ ಫುಲೆ ತಾಲೂಕಾ ಅಧ್ಯಕ್ಷರು ಬಸವಕಲ್ಯಾಣ, ರವಿ ಉದಾತೆ ತಾಲೂಕಾ ಪ್ರಧಾನ ಕಾರ್ಯದರ್ಶಿ ಬಸವಕಲ್ಯಾಣ, ದತ್ತು ಸುಂಠಾಣೆ ತಾಲೂಕಾ ಸಂಯೋಜಕರು ಬಸವಕಲ್ಯಾಣ
ಮಕ್ಬುಲ ಸಾಬ ತಾಲೂಕಾ ಸಂಯೋಜಕರು ಬಸವಕಲ್ಯಾಣ, ಮಹಾದೇವ ಗಾಯಕವಾಡ ತಾಲೂಕಾ ಪ್ರಧಾನ ಕಾರ್ಯದರ್ಶಿ ಬಸವಕಲ್ಯಾಣ, ರಮೇಶ ರಾಠೋಡ ತಾಲೂಕ ಉಪಾಧ್ಯಕ್ಷರು
ಸಚಿನ ಕಾಂಬಳೆ ತಾಲೂಕಾ ಉಪಾಧ್ಯಕ್ಷರು , ಚಂದ್ರಕಾಂತ ಲಂಗಡೆ ತಾಲೂಕ ಕಾರ್ಯದರ್ಶಿಗಳು ಹಾಗೂ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!