
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ 8 ನೇ ವಾರ್ಡನ ವೆಂಕಟೇಶ್ ನಾಯ್ಕ್ ರವರ ಮನೆಯಿಂದ ಗಂಗೋತ್ರಿ ಶಾಲೆಯವರೆಗೆ ಮಳೆ ಬಂದರೆ ಸಾಕು ಎಡಗಡೆ ಮತ್ತು ಬಲಗಡೆ ಕಾಲುವೆ ಇಲ್ಲದ ಕಾರಣ ಈ ರಸ್ತೆಯಲ್ಲಿ ಮಳೆ ನೀರು ಹರಿದು ರಸ್ತೆಯು ಕೆಸರು ಗದ್ದೆಯಂತಾಗಿ ತಗ್ಗು ಗುಂಡಿಗಳಲ್ಲಿ ಮಳೆ ನೀರು ನಿಂತು ಈ ವಾರ್ಡನಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಹಾಗೂ ಸಣ್ಣಪುಟ್ಟ ಮಕ್ಕಳಿಗೆ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಮುನ್ನ ಹಾಗೂ ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಶಾಲೆ ಕಾಲೇಜ್ ಗೆ ಹೋಗುವಾಗ ತಗ್ಗು ಗುಂಡಿಗಳನ್ನು ತಪ್ಪಿಸಲು ಹೋಗಿ ಈ ರಸ್ತೆಯಲ್ಲಿ ಬಿದ್ದು ಕೈಕಾಲು ಕೂಡಾ ಮುರಿದುಕೊಂಡು ಹೋಗಿದ್ದಾರೆ ,

ಈ ವಾರ್ಡ್ ನ ನಿವಾಸಿಗಳು 10 ವರ್ಷದಿಂದ ಈ ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ, ಆದರೆ ಸಂಬಂಧಪಟ್ಟ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಮಾತ್ರ ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜ್ ಗೆ ಹೋಗುವ ವಿದ್ಯಾರ್ಥಿಗಳಿಗೆ ಓಡಾಡಲು ಈ ರಸ್ತೆಯನ್ನು ಸ್ವಚ್ಚ ಮಾಡಿಕೊಡಲು ಮುಂದಾಗುತ್ತಿಲ್ಲ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು 8 ನೇ ವಾರ್ಡನ ಪಟ್ಟಣ ಪಂಚಾಯಿತಿ ಸದಸ್ಯರು, ಕೂಡಲೇ ಸಾರ್ವಜನಿಕರಿಗೆ ವಿಧ್ಯಾರ್ಥಿಗಳಿಗೆ , ಈ ರಸ್ತೆಯನ್ನು ಸ್ವಛತೆ ರಸ್ತೆಯನ್ನಾಗಿ ನಿರ್ಮಾಣ ಮಾಡಿಕೊಡಬೇಕೆಂದು ಬಿಜೆಪಿ ಒ ಬಿ ಸಿ ಘಟಕದ ಅಧ್ಯಕ್ಷ ಎಂ ಚಂದ್ರಶೇಖರ್ ಮಾತನಾಡಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಚೇತನ್, ಪ್ರಕಾಶ್, ಬಾಲರಾಜ ಇತರರು ಇದ್ದರು.



















