ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕು ನೀರಲ ಕೇರಿ ಗ್ರಾಮ ಘಟಕ ಉದ್ಘಾಟನೆ ಕಾರ್ಯಕ್ರಮ ಮಾಡಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ನೀಡಲಾಯಿತು. ನಾರಾಯಣಗೌಡರ ಆದರ್ಶ, ತತ್ವಗಳನ್ನು ಮೆಚ್ಚಿ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರು ಗಣಪತಿ ಭೋವಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಸೇರ್ಪಡೆಗೊಂಡು ಗ್ರಾಮ ಘಟಕ ಉದ್ಘಾಟನೆ ಮಾಡಿದರು.
ಕಾರ್ಯಕ್ರಮಕ್ಕೆ ರಂಜಾನ್ ನದಾಫ್ ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷರು, ಸಲೀಂ ಜರತಾರಿ ಸಂಘಟನಾ ಕಾರ್ಯದರ್ಶಿ, ವೀರಣ್ಣ ಬಡಿಗೇರ ಸಹ ಕಾರ್ಯದರ್ಶಿ, ಮಂಜುನಾಥ ಕಲಾಲ ಬಾದಾಮಿ ತಾಲೂಕು ಅಧ್ಯಕ್ಷರು,ನಾಗರಾಜ ಮಾದರ ತಾಲೂಕು ಉಪಾಧ್ಯಕ್ಷರು, ಪಕೀರಪ್ಪ ಅಮರಗೋಳ ನಗರ ಘಟಕದ ಅಧ್ಯಕ್ಷರು, ಕೃಷ್ಣಾ ಮ್ಯಾಗೇರಿ ನಗರ ಘಟಕದ ಕಾರ್ಯದರ್ಶಿ,
ಉದಯ ಬಿಂಕದಕಟ್ಟಿ ಸಾಮಾಜಿಕ ಜಾಲತಾಣದ ಸಂಚಾಲಕರು, ಸಿದ್ದು ಹಾರಿನ ತಾಲೂಕು ಸಂಘಟನಾ ಕಾರ್ಯದರ್ಶಿ ಸೇರಿದಂತೆ ಇನ್ನೂ ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ.ಅಬ್ದುಲಸಾಬ ನಾಯ್ಕರ



















