ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕ ಪಂಚಾಯತ ಸಭಾಂಗಣದಲ್ಲಿ ನಿನ್ನೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಿದ್ದ ಸಂದರ್ಭದಲ್ಲಿ ನರೇಗಾ ಯೋಜನೆಯಲ್ಲಿ ಹೆಚ್ಚಿನ ಮಾನವ ದಿನಗಳನ್ನು ಸೃಜನೆ ಮಾಡುವಂತೆ ಜಿ. ಪಂ. ಯೋಜನಾ ನಿರ್ದೇಶಕರು ರವಿ ಬಂಗಾರೆಪ್ಪನ್ನವರ ಕರೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿ ಅರ್ಹ ಕುಟುಂಬಕ್ಕೆ ಉದ್ಯೋಗ ಚೀಟಿಯನ್ನು ನೀಡಿ ಅವರಿಗೆ ವಾರ್ಷಿಕವಾಗಿ 100 ದಿವಸ ಕೆಲಸ ನೀಡಿದರೆ ರೂ. 37,000/- ರೂ ಕೂಲಿ ಪಡೆಯುವ ಮೂಲಕ ಆ ಕುಟುಂಬವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಡತೆಯನ್ನು ಹೊಂದಲು ಸ್ಥಳೀಯ ಸರ್ಕಾರದಿಂದ ಅನಕೂಲವಾಗುತ್ತದೆ ಆದ್ದರಿಂದ ಎಲ್ಲಾ ಕೂಲಿಕಾರ್ಮಿಕರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ತಾಲೂಕಿನಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಲಹೆ ನೀಡಿದರು.
ವಿವಿಧ ಯೋಜನೆಗಳಾದ ಸ್ವಚ್ಛ ಭಾರತ ಮಿಷನ್, 15 ನೇ ಹಣಕಾಸು ಯೋಜನೆ, ಜಲಜೀವನ ಮಿಷನ್, ಕುಡಿಯುವ ನೀರು, ಕೂಸಿನ ಮನೆ, ಗ್ರಂಥಾಲಯ, ಸಾಮಾಜಿಕ ಲೆಕ್ಕಪರಿಶೋಧನೆ ಹಾಗೂ ಕರವಸೂಲಿಯನ್ನು ಮಾಡುವಂತೆ ಸಭೆಯಲ್ಲಿ ಸೂಚಿಸಿದರು.
ಇದೇ ಸಂದರ್ಭದಲ್ಲಿ ತಾ. ಪಂ. ಕಾರ್ಯನಿರ್ವಹಕ ಅಧಿಕಾರಿಗಳು ಸಂಜೀವ ಜುನ್ನೂರ. ತಾಪಂ ಸಹಾಯಕ ನಿರ್ದೇಶಕರು (ಗ್ರಾ.ಉ) ವಿಜಯ ಪಾಟೀಲ ಮತ್ತು ಪಂ ರಾಜ್ ಸಹಾಯಕ ನಿರ್ದೇಶಕರು ರಘು ಬಿ ಎನ್, ತಾಪಂ ಯೋಜನಾಧಿಕಾರಿ ರಾಜಶೇಖರ ಕಡೆಮನಿ, ತಾಪಂ ಲೆಕ್ಕಾಧಿಕಾರಿ ಪ್ರಶಾಂತ ಹಿರೇಮಠ ಹಾಗೂ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಪಂ ಸಿಬ್ಬಂದಿಗಳು ಮತ್ತು ನರೇಗಾ ಸಿಬ್ಬಂದಿಗಳು ಹಾಜರಿದ್ದರು.
ವರದಿ ಮಂಜು .ಎಮ್ .ಚಿಕ್ಕಣ್ಣವರ



















