ಬಳ್ಳಾರಿ/ ಕಂಪ್ಲಿ : ಡಾ. ಫ. ಗು. ಹಳಕಟ್ಟಿ ಜನ್ಮದಿನದ ಹಿನ್ನೆಲೆಯಲ್ಲಿ ಬುಧವಾರ ತಹಸಿಲ್ ಕಚೇರಿ ಸಭಾಂಗಣದಲ್ಲಿ ವಚನ ಸಾಹಿತ್ಯ ಸಂರಕ್ಷರ ದಿನ ಆಚರಿಸಲಾಯಿತು.
ತಹಶೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ ವಚನಗಳ ಉಳಿವಿಗೆ ಶ್ರಮಿಸಿದ್ದ ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದರು.
ಷಾಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಡಾ. ಬಿ. ಸುನಿಲ್ “ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಹಾಗೂ . ಫ. ಗು. ಹಳಕಟ್ಟಿಯವರ ಪಾತ್ರ ಹಾಗು ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿ ಮಾತನಾಡಿ ವಿಶ್ವದ ಸಾಹಿತ್ಯ ಮತ್ತು ಧರ್ಮದಲ್ಲಿ ಕಾಣದ ವೈಜ್ಞಾನಿಕ, ಧಾರ್ಮಿಕ, ಸಾಮಾಜಿಕ ಮೌಲ್ಯಗಳು ವಚನ ಸಾಹಿತ್ಯದಲ್ಲಿವೆ. ವಚನಗಳನ್ನು ಮುಂದಿನ ಪೀಳಿಗೆ ಉಳಿಸುವ ದೃಷ್ಟಿಯಿಂದ ಅಧ್ಯಯನ ಅಗತ್ಯ’ ವಚನ ಪಿತಾಮಹ ಹಳಕಟ್ಟಿ ಅವರು ಬಹುಮುಖ ಪ್ರತಿಭೆ ಉಳ್ಳವರು. ಅವರ ಬದುಕಿನ ಕೊನೆವರೆಗೂ ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿ ಪ್ರಸಾರ ಮಾಡಿದ್ದಾರೆ. ವಚನ ಸಾಹಿತ್ಯದ ಬೆಳಕು ಜಗತ್ತಿಗೆ ಪಸರಿಸಿದ್ದಾರೆ. ಅವರಿಂದ ವಿಶ್ವ ಮಾನ್ಯತೆ ಪಡೆದ ವಚನಗಳು ದೊರೆತ್ತಿವೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ತಹಶೀಲ್ದಾರ್ ಆಡಳಿತದ ಸಿಬ್ಬಂದಿ ವರ್ಗದವರು ಹಾಗೂ ಕನ್ನಡ ಹಿತರಕ್ಷಕ ಸಂಘದ ಗೌರಾವಾಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್, ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಎಸ್.ಡಿ.ಬಸವರಾಜ, ಬಿ.ಎಂ.ರುದ್ರಯ್ಯ, ಪಾಮಯ್ಯ ಶರಣರು, ಎಲಿಗಾರ್ ವೆಂಕಟರೆಡ್ಡಿ, ಸಜ್ಜೆದ ವೀರಭದ್ರಪ್ಪ, ನೀಲಕಂಠಪ್ಪ, ಅಶೋಕ್ ಕುಕನೂರು ಸೇರಿದಂತೆ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















