
ಶಾಸಕ ಎಂ.ಆರ್ ಮಂಜುನಾಥ್ ರವರ ನೇತೃತ್ವದಲ್ಲಿ ತ್ರೈಮಾಸಿಕ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಹನೂರು : ಚಾಮರಾಜನಗರ ಜಿಲ್ಲೆಯಲ್ಲಿಯೇ ಪಶು ವೈದ್ಯರ ಕೊರತೆ ತುಂಬಾ ಕಾಡುತ್ತಿದೆ. ಜಿಲ್ಲೆಗೆ 89 ಹುದ್ದೆ ಇದ್ದು ಕೇವಲ 18 ಜನರು ಮಾತ್ರ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಲ್ಲೂ ಹನೂರು ತಾಲೂಕಿನಲ್ಲಿ ಇರುವ 10 ಹುದ್ದೆಗೆ ಕೇವಲ ಒಬ್ಬರು ಮಾತ್ರ ಕರ್ತವ್ಯ ಮಾಡುತ್ತಿದ್ಫು ತುಂಬಾ ಕಷ್ಟದ ಹಾದಿ ಎದುರಾಗಿದೆ. ಆದರೂ ಸಹ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಹನೂರು ವೈದ್ಯಾಧಿಕಾರಿ ಡಾ. ಸಿದ್ದರಾಜು ಹೇಳಿದರು.
ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ, ಆಗದಂತೆ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿ ಅಬಿವೃದ್ದಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.ಶಾಲೆ ಬಿಟ್ಟಿರುವ ಮಕ್ಕಳು, ಶಿಕ್ಷಕರ ಕೊರತೆ, ವಿವಿಧ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ, ಕಾಡು ಪ್ರಾಣಿಗಳ ಹಾವಳಿಗಳ ಬಗ್ಗೆ ಕ್ರಮ ವಹಿಸಲು ಸೂಚನೆ ನೀಡಿದರು.
ರಸ್ತೆ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಿ
ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗುದ್ದಲಿ ಪೂಜೆ ಆಗಿರುವ ಎಲ್ಲಾ ರಸ್ತೆಗಳು ಸಹ ಕಾಮಗಾರಿ ಆರಂಭ ಆಗಬೇಕು. ಜೊತೆಗೆ ಗುಣಮಟ್ಟದಿಂದ ಕಾಮಗಾರಿ ಕೂಡಿರಬೇಕು. ಕಾಮಗಾರಿ ಪ್ರಾರಂಭ ವಾಗದಿದ್ದಲ್ಲಿ ಅದಕ್ಕೆ ನೀವೇ ನೇರ ಹೊಣೆಗಾರರಾಗಬೇಕಾಗುತ್ತದೆ. ತುರ್ತಾಗಿ ತಾವೇ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಕೆಲಸ ಮಾಡಿ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಮುದಾಯ ಭವನ ನಿರ್ಮಾಣ ಆಗಲಿ
ಕೇಂದ್ರ ಸ್ಥಾನಗಳಲ್ಲಿ ಒಳ್ಳೆಯ ಸುಸಜ್ಜಿತ ಸಮುದಾಯ ಭವನಗಳು ನಿರ್ಮಾಣ ಮಾಡಬೇಕು. ಅಜ್ಜೀಪುರ ದಂತಹ ದೊಡ್ಡ ಗ್ರಾಮಗಳಿಗೆ ಈಗಿರುವ ಚಿಕ್ಕ ಸಮುದಾಯದ ಭವನ ನಿರ್ಮಾಣ ಮಾಡಿದರೆ ಪ್ರಯೋಜನ ಇಲ್ಲ ಎಂದರು.
ಹನೂರಿನಲ್ಲಿ ದೊಡ್ಡಬಳ್ಳಾಪುರ ಮಾದರಿಯಲ್ಲಿ ಕಸ ವಿಲೇವಾರಿ ಘಟಕವನ್ನು ಮುಂದಿನ ದಿನಗಳಲ್ಲಿ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.
ಇದೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರುತಿ, ಹನೂರು ತಹಸೀಲ್ದಾರ್ ವೈ ಕೆ ಗುರುಪ್ರಸಾದ್, ಇ ಒ ಉಮೇಶ್, ಗ್ಯಾರಂಟಿ ಯೋಜನೆ ಗಳ ಅಧ್ಯಕ್ಷ ರಾಚಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಪಶು ಇಲಾಖೆಯ ಡಾ. ಸಿದ್ದರಾಜು, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಕೇಶವ ಮೂರ್ತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ರಾಜೇಶ್, ಕೃಷಿ ಇಲಾಖೆಯ ರಂಗಸ್ವಾಮಿ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್



















