ಶಿವಮೊಗ್ಗ: ತೀರ್ಥಹಳ್ಳಿ ರಾಷ್ಟ್ರಕವಿ ಕುವೆಂಪು ಓದಿದ ಶಾಲೆ ನಿರ್ವಹಣೆ ಇಲ್ಲದೆ ಸೋರುತಿದೆ. ಶತಮಾನದ ಇತಿಹಾಸ ಇದ್ದಂತಹ ಶಾಲೆ ಈಗ ಸಂಪೂರ್ಣ ಹಾಳಾಗಿದ್ದು , ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತೀರ್ಥಹಳ್ಳಿ ಪಟ್ಟಣದ ಅಂಚೆ ಕಚೇರಿ ಪಕ್ಕದಲ್ಲಿರುವ ರಾಷ್ಟಕವಿ ಕುವೆಂಪು ಓದಿದ ಶಾಲೆ ಸಂಪೂರ್ಣ ಹಾಳಾಗಿದ್ದು , ಶಾಲೆಯ ಒಳಗೆ ಸಂಪೂರ್ಣ ನೀರಿನ ಹೊಳೆ ಹರಿದಿದೆ. ಸರ್ಕಾರಿ ಶಾಲೆಯಲ್ಲಿ ಈಗಲೂ ನೂರಾರು ಮಕ್ಕಳು ಒದುತಿದ್ದಾರೆ. ಇಂತಹ ಪ್ರಸ್ಥಿತಿಯಲ್ಲೂ ಅಧಿಕಾರಿಗಳು ಬೇಜವಾಬ್ದಾರಿಯಾಗಿ ಶಾಲೆ ನಿರ್ವಹಣೆ ಮಾಡುತ್ತಿರುವುದು ದುರದೃಷ್ಟಕರ ಅಧಿಕಾರಿಗಳು ಈಗ ಮೌನ ವಹಿಸಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೊಸದಾಗಿ ಮಾಡಿರುವ ಅಡಿಗೆ ಕೊಣೆಯು ಸೋರುತಿದ್ದು ಅಲ್ಲಿ ಇರುವ ಅಡಿಗೆ ಸಮಾಗ್ರಿಗಳಾದ ,ಅಕ್ಕಿ ,ಬೇಳೆ ಮಳೆನೀರಿನಲ್ಲಿ ನೆನೆದು ಹೋಗಿವೆ, ಅದೇ ಆವರಣದಲ್ಲಿ ಸಿ ಆರ್ ಪಿ ಕಟ್ಟಡ ಇದ್ದು ಅದು ಸಹ ಸೋರುತ್ತಿದೆ ಅದನ್ನೇ ಸರಿಪಡಿಸದ ಅಧಿಕಾರಿಗಳು ಹಿನ್ನು ಶಾಲೆ ಕಟ್ಟಡ ಸರಿಪಡಿಸುತ್ತಾರೆಯೇ?ಈ ಮಳೆಗಾಲದಲ್ಲಿ ಶಾಲೆ ಕಟ್ಟಡ ಕುಸಿದು ಬೀಳುವ ಆತಂಕ ಉಂಟು ಎಂದು ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಹೇಳಿದರು. ಕೂಡಲೇ ಎಚೆತ್ತು ಶಿಕ್ಷಣ ಇಲಾಖೆ ಹಾಗೂ ಶಾಸಕರು ಸರ್ಕಾರಕ್ಕೆ ಒತ್ತಾಯಿಸಿ ಶಾಲೆ ಸರಿಪಡಿಸಿ, ಕುವೆಂಪು ಓದಿದ ಶಾಲೆ ದುರಸ್ಥಿ ಮಾಡಬೇಕೆಂದು ಸಾರ್ವಜನಿಕರು ಹಾಗೂ ಪೋಷಕರು ಒತಾಯಿಸುತ್ತಿದ್ದಾರೆ.
ವರದಿ:ಪ್ರಸಾದ್ ಹೆಚ್ ಬಿ ತೀರ್ಥಹಳ್ಳಿ.



















