ಬಳ್ಳಾರಿ/ ಕಂಪ್ಲಿ : ಕಳೆದ ನಾಲ್ಕು ದಿನದಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಎಲ್ ಎಲ್ ಸಿ ಕಾಲುವೆಗೆ ಬೇಗ ನೀರು ಬಿಡಬೇಕು ಎಂದು
ಎಲ್ ಎಲ್ ಸಿ 70ನೇ ಕಿ.ಮೀ ನಂತರ ಕಾಮಗಾರಿ ನಡೆಯುತ್ತಿದ್ದು ಈಗ ನೀರು ಬಿಟ್ಟು 70ಕಿ.ಮೀ ವರೆಗಿನ ರೈತರಿ ಹೊಲ – ಗದ್ದೆ ಕೆಲಸಕ್ಕೆ ಅನುಕೂಲ ಮಾಡಲು ಒತ್ತಾಯಿಸಲಾಗಿತ್ತು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಮತ್ತು ಎಲ್ಲಾ ಭಾಗದ ರೈತರು ಬೆಳೆ ಬೆಳೆಯಲು ಅನುಕೂಲವಾಗುತ್ತದೆ
ಎಂದು ಕರ್ನಾಟಕ ಮತ್ತು ಬೋರ್ಡ್ ಅಧಿಕಾರಿಗಳಿಗೆ ನಿರಂತರ ಒತ್ತಾಯ ಮಾಡಲಾಗಿತ್ತು.
ಆದರೆ ಬೋರ್ಡ್ ಅಧಿಕಾರಿಗಳು ನೀರು ಬಿಡಲು ಕಾಲುವೆಗೆ ಎಲ್ ಎಲ್ ಸಿ ಪವರ್ ಕಾಲುವೆ 9ಕಿ.ಮೀ ನಲ್ಲಿ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ ಮತ್ತು 15ನೇ ಕಿ.ಮೀ ನಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಆದ ಕಾರಣ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ. ವಿ. ಗೌಡ ಮಾತನಾಡಿ
9 ನೇ ಕಿ.ಮೀ ನಲ್ಲಿ ಇರುವ ಬ್ರಿಡ್ಜ್ ಹತ್ತಿರ ವೀಕ್ಷಣೆ ಮಾಡಿ ಕಾಮಗಾರಿ ಮುಗಿದಿದ್ದು , ಬ್ರಿಡ್ಜ್ ಸೆಂಟ್ರಿಂಗ್ ತೆಗೆಯುವಲ್ಲಿ ವಿಳಂಬವಾಗಿದ್ದು ಬೇಗ ತೆಗೆಯಲು ಹೇಳಿದರು.
ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೇಗ ಕಾರ್ಯ ಆರಂಭಿಸಿದರು ಮತ್ತು ಎಲ್‌ಎಲ್‌ಸಿ 15ನೇ ಕಿ. ಮೀ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿ ಬೇಗ ಮುಗಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕು ಕಾರ್ಯಾಧ್ಯಕ್ಷರಾದ ಕೊಟ್ಟೂರು ರಮೇಶ, ಡಿ. ಮುರಾರಿ ಕಂಪ್ಲಿ ನಗರ ಘಟಕ ಅಧ್ಯಕ್ಷ ತಿಮ್ಮಪ್ಪ ನಾಯಕ, ಪದಾಧಿಕಾರಿಗಳಾದ ಗೋವಿಂದಪ್ಪ, ವಿರುಪಣ್ಣ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಜಿಲಾನಸಾಬ್ ಬಡಿಗೇರ



















