ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದಲ್ಲಿ ಬೆಳಗಿನ ಜಾವ ಮೂರು ಗಂಟೆಯಿಂದ ಪ್ರಾರಂಭವಾಗಿ ಡಣಾಪುರದಿಂದ ಹಳೆ ಅಯೋಧ್ಯೆಗೆ ಹೋಗಿ ಅಲ್ಲಿ ಅಲಾಯಿ ಬಿಲಾಯಿ ನೀಡಿ ನಂತರ ಡಣಾಪುರ ರಾಜ ಬೀದಿಯಲ್ಲಿ ಡಣಾಪೂರ ಹಾಗೂ ಹೆಬ್ಬಾಳ ,ಹಳೆ ಅಯೋಧ್ಯ ಮೂಲಕ ದೇವರುಗಳು ಸಾವಿರಾರು ಭಕ್ತಾದಿಗಳ ಮುಂದೆ ಅಲಾಯಿ ಬಿಲಾಯಿ ನೀಡಲಾಯಿತು.
ಹಲಗೆ ತಮಟೆ ಸದ್ದಿನೊಂದಿಗೆ ಮೊಹರಂ ಹಬ್ಬ ಬೆಳಗಿನ ಜಾವಾ ಅದ್ದೂರಿಯಾಗಿ ಜರುಗಿತು.
ಎಲ್ಲೆಡೆ ಹಬ್ಬದ ವಾತಾವರಣ ನೋಡುಗರನ್ನು ಕಣ್ ಮನ ಸೆಳೆಯುವಂತಿತ್ತು.
ವರದಿ ಹನುಮೇಶ ಭಾವಿಕಟ್ಟಿ



















