ಬಳ್ಳಾರಿ/ ಕಂಪ್ಲಿ : ನಗರದ ಧೂಪದ ಬಸವರಾಜ, ಧೂಪದ ಜ್ಯೋತಿ ಅವರ ಮನೆಯಲ್ಲಿ ನಿನ್ನೆ ರಾತ್ರಿ ಬ್ರಹ್ಮಕಮಲದ ಹೂ ಅರಳಿದೆ.
ಈ ಹೂ ರಾತ್ರಿ ಅರಳುತ್ತೆ ಬೆಳಗಾಗುವುದರೊಳಗಾಗಿ ಬಾಡುತ್ತೆ, ಅಷ್ಟೇ ಅಲ್ಲ ವರ್ಷಕ್ಕೆ ಒಮ್ಮೆ ಮಾತ್ರ ಅರಳುವುದು. ಇದರ ಸುವಾಸನೆ ವಿಶೇಷವಾದುದು. ಶಿವಲಿಂಗ ಪೂಜೆಗೆ ಮಹತ್ವದ್ದು. ಅರಳಿದ ತಕ್ಷಣ ಪೂಜೆ ಮಾಡುವ ಪದ್ದತಿಯೂ ಇದೆ. ಈ ಹೂ ಅರಳುವುದನ್ನು ನೋಡಲು ಸುತ್ತಮುತ್ತಲಿನ ಜನರು ಸಹ ಸೇರುತ್ತಾರೆ.
ಬ್ರಹ್ಮ ಕಮಲವು ವರ್ಷಕ್ಕೊಮ್ಮೆ ಅರಳುತ್ತದೆ. ಆದ್ದರಿಂದಲೇ ಈ ಹೂವು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಿಂದೂ ಧರ್ಮದಲ್ಲಿ ಇದು ಬಹಳ ಪೌರಾಣಿಕ , ಧಾರ್ಮಿಕ ಮಹತ್ವವನ್ನು ಹೊಂದಿದೆ. ಬ್ರಹ್ಮ ಕಮಲ ಎಂದರೆ ಸೃಷ್ಟಿಕರ್ತ ಬ್ರಹ್ಮ ಧ್ಯಾನ ಮಾಡುತ್ತಾ ಕುಳಿತಿರುವ ಹೂವು. ಬ್ರಹ್ಮನು ವಿಷ್ಣುವಿನ ಹೊಕ್ಕುಳದಿಂದ ಹೊರ ಹೊಮ್ಮುವ ಕಮಲದಿಂದ ಜನಿಸಿದರಿಂದ ಈ ಕಮಲಕ್ಕೆ ಬ್ರಹ್ಮ ಕಮಲ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಹೂವನ್ನು ದೇವರಂತೆ ಪರಿಗಣಿಸಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ



















