ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ನಲ್ಲಿರುವ ಡಾ. ಬಾಬು ಜಗಜೀವನರಾಮ ರವರ ಪುತ್ಥಳಿ ಎದುರು ಮಾದಿಗ ದಂಡೋರ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರ 60ನೇ ಜನ್ಮದಿನ ಪ್ರಯುಕ್ತ ಮಾದಿಗ ದಂಡೋರ ಜಿಲ್ಲಾಧ್ಯಕ್ಷರಾದ ಸುಂದರ ಡಿ. ಸಾಗರ ಅವರ ನೇತೃತ್ವದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ರಾಜು ಹದನೂರ, ಹಣಮಂತ ಮೇಲಿನಕೇರಿ, ಲಿಂಗರಾಜ ತಾರಪೈಲ, ರಾಜು ವಾಡೇಕಾರ, ಚಂದ್ರಕಾಂತ ನಾಟೀಕಾರ, ದಶರಥ ಕಲಗುರ್ತಿ, ರಂಜಿತ ಮೂಲಿಮನಿ, ಗುರು ಭಂಡಾರಿ, ಶರಣಪ್ಪ ದಂಡೋತಿ, ನಾಗೇಂದ್ರ ದಂಡೋತಿ, ಗೋರಖನಾಥ ಶಾಖಾಪೂರ, ಕಮಲಾಪೂರ ತಾಲೂಕು ಅಧ್ಯಕ್ಷ ಚನ್ನವೀರ ದಸ್ತಾಪೂರ, ಕಿರಾಣ ರಾಜಾಪೂರ ಸೇರಿದಂತೆ ಮಾದಿಗ ಸಮಾಜದ ಮುಖಂಡರು ಇದ್ದರು.
- ಕರುನಾಡ ಕಂದ



















