ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪೂರ ಗ್ರಾಮದಲ್ಲಿ ಮೊಹರಂ ಹಬ್ಬದ ಕೊನೆಯ ದಿನ ಧಪನ ಕಾರ್ಯಕ್ರಮ ವಿಜೃಂಭಣೆಯಿಂದ ಕಂಡುಬಂತು. ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಆಲಾಯಿ ದೇವರ ಆರಾಧನೆ ಜೋರಾಗಿತ್ತು, ಗ್ರಾಮದ ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಲಾಲಸಾಬ ದೇವರು ರವಿವಾರ ಬೆಳಗ್ಗೆ ಯೇ ಸವಾರಿಗಳು ಭಕ್ತರ ಮನೆಗಳಿಗೆ ಹೋಗಿಬಂದು ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರಿಗೆ ನಮಿಸಿ ಇಷ್ಟಾರ್ಥ ಪೂರೈಸುವಂತೆ ಬೇಡಿಕೊಂಡರು. ಸಕ್ಕರೆ ಹೂವಿನ ಹಾರ ನ್ಯೆವೇದ್ಯ ಅರ್ಪಿಸಿದರು. ಕೊನೆಯ ದಿನವಾದ ಕಾರಣ ಹಿಂದೂ ಮುಸ್ಲಿಂ ಸಮುದಾಯದವರು ಧರ್ಮ ಬೇದ ಮರೆತು ಮೊಹರಂ ಹಬ್ಬವನ್ನು ಭಾವೈಕ್ಯತೆಯಿಂದ ಅದ್ದೂರಿಯಾಗಿ ಆಚರಿಸಿ ಸಾಮರಸ್ಯ ಮೆರೆದರು. ತಾರಾಪುರ ಗ್ರಾಮದಲ್ಲಿ ನಡೆಯುವ ಮೊಹರಂ ಹಬ್ಬದಲ್ಲಿ ಆಲಾಯಿ ದೇವರ ಪಂಜಾಗಳನ್ನು ಹೊರುವ ಸಂಪ್ರದಾಯ ಹಿಂದೂ ಮುಸ್ಲಿಂ ಸಮುದಾಯ ಎಲ್ಲರೂ ಸೇರಿ ಆಚರಿಸುತ್ತಿದ್ದಾರೆ ಈ ಆಲಾಯಿ ದೇವರಿಗೆ ತಾರಾಪುರ ಗ್ರಾಮದ ಗೌಡರ ಮನೆತನದವರಾದ ಶಂಕರಗೌಡ ಶರಣಗೌಡ ಪಾಟೀಲ ಎಂಬುವವರು ಪ್ರತಿ ವರ್ಷ ಆಲಾಯಿ ದೇವರಿಗೆ ಅಲಂಕಾರ ಮಾಡಿ ಪೂಜೆ ಪುನಸ್ಕಾರ ನ್ಯೆವೇದ್ಯ ಮಾಡಿದ ಬಳಿಕ ಚಾಲನೆ ನೀಡುವ ಮೂಲಕ ಆಚರಣೆ ಮಾಡಲಾಗುತ್ತದೆ.
ಇದೇ ಸಂದರ್ಭದಲ್ಲಿ ಸಾತುಗೌಡ ಬಿರಾದಾರ ಪಿಕೆಪಿಎಸ್ ಸದಸ್ಯರು ಕಡಣಿ ಮಾತನಾಡಿ ಹಿಂದೂ ಮುಸ್ಲಿಂ ಬಾಂಧವ್ಯ ಮರೆತು ತಾರಾಪುರ ಗ್ರಾಮದಲ್ಲಿ ಬಹು ವಿಜೃಂಭಣೆಯಿಂದ ಮೊಹರಂ ಆಚರಣೆ ಮಾಡುತ್ತೇವೆ ಎಂದು ಹೇಳಿದರು.
ತಾರಾಪುರ ಗ್ರಾಮದ ಮೊಹರಂ ಚರಣೆಯಲ್ಲಿ ಊರಿನ ಹಿರಿಯರು ಮಹಿಳೆಯರು, ಯುವಕರು ಭಾಗಿಯಾದರು.
ವರದಿ :ಹಣಮಂತ ಚ. ಕಟಬರ್



















