ಬಸ್ ನಂದೇ ಅನ್ನೋ ತರ ಇರಬೇಕು ಪ್ರವಾಸ ಮಾಡಬೇಕು.!
ಆದರೆ ಬಸ್ಸು ನಮ್ಮದಲ್ಲ, ಪ್ರವಾಸವೂ ನಮಗಾಗಿ ಅಲ್ಲ.!!
ನಮಗೆ ಬೇಕೋ ಬೇಡವೋ ಎಲ್ಲರನ್ನೂ ಮಾತಾಡಿಸಲೇಬೇಕು ಆದರೆ ಅವರಾರು ನಮ್ಮವರಲ್ಲ.!!
ಎಲ್ಲಿಯವರೆಗೆ ಬಸ್ಸು ಚಾಲನೆಯಲ್ಲಿರತ್ತೋ ಅಲ್ಲಿಯವರೆಗೆ ಮಾತ್ರ ಎಲ್ಲರೂ ಜೊತೆಯಲ್ಲಿರುತ್ತಾರೆ, ಒಂದು ವೇಳೆ (ಕೆಟ್ಟು) ನಿಂತರೆ ಆಗ ನಡುದಾರಿಯಲ್ಲಿಯೇ ಅವರೆಲ್ಲರೂ ನಮ್ಮನ್ನು ಒಂಟಿಯಾಗಿ ಬಿಟ್ಟು ಹೋಗುತ್ತಾರೆ.!!
ಬ್ಯಾಗ್ ತುಂಬಾ ಹಣ ಸಂಗ್ರಹಿಸಿದರೂ ಅದು ನಮ್ಮದಲ್ಲ, ಕೊನೆಗೆ ಎಲ್ಲವನ್ನೂ ಡಿಪೋಗೆ ಒಪ್ಪಿಸಿ ಬರಿಗೈಲಿ ಮನೆಗೆ ಮರಳಬೇಕು.!!
ಎಲ್ಲರನ್ನೂ ತಲುಪಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸಿದರೆ, ಯಾರೊಬ್ಬರೂ ಥ್ಯಾಂಕ್ಸ್ ಹೇಳಿ ಹೋಗಲ್ಲ,
ಆದರೆ ಏನಾದರೂ ತೊಂದರೆಯಾದರೆ ಶಪಿಸದೇ ಮುಂದೆ ಸಾಗಲ್ಲ.!!
ನಮ್ಮೆಲ್ಲರ ಜೀವನವೂ ಕೂಡಾ ಕಂಡಕ್ಟರ್ ನಂತೆ ಅನ್ನೋದನ್ನ ಅರ್ಥ ಮಾಡಿಕೊಂಡವರು ಮಾತ್ರ ಈ ಜಗತ್ತಿನಲ್ಲಿ ನೆಮ್ಮದಿಯಾಗಿರಬಲ್ಲರು.!!
✍️ ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ
ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ
ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರು.



















