ಬಳ್ಳಾರಿ/ ಕಂಪ್ಲಿ : ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಕಂಪ್ಲಿ ತಾಲೂಕು ಘಟಕದಿಂದ ದೇವದಾಸಿ ಮಹಿಳೆಯರ ಸಂಘದ ಸಹಯೋಗದಲ್ಲಿ ದೇವದಾಸಿ ಮಕ್ಕಳ ವಿದ್ಯಾಭ್ಯಾಸಕ್ಕನುಸಾರ ಯುವನಿಧಿ ರೀತಿಯಲ್ಲಿ ಉದ್ಯೋಗ ಭತ್ಯೆ ಒದಗಿಸಲು ಆಗ್ರಹಿಸಿ, ಸಿ. ಎಂ. ಗೆ ಬರೆದ ಮನವಿ ಪತ್ರವನ್ನು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಮಂಜುನಾಥ ನಾಯಕ ಇವರಿಗೆ ಗುರುವಾರ ಸಲ್ಲಿಸಿದರು.
ನಂತರ ದೇವದಾಸಿ ಮಹಿಳೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ, ದೇವದಾಸಿ ಪದ್ಧತಿಗೆ ತುತ್ತಾದ ಮಹಿಳೆಯರ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ ಮಕ್ಕಳಿಗೆ ಉದ್ಯೋಗ ಸಿಗುತ್ತಿಲ್ಲ. ಇದರಿಂದ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಜೀವನವು ಕಷ್ಟಕರವಾಗಿದೆ. ಆದ್ದರಿಂದ ಉದ್ಯೋಗ ದೊರೆಯುವವರೆಗೂ ವಿದ್ಯಾಭ್ಯಾಸಕ್ಕನುಸಾರವಾಗಿ ಕನಿಷ್ಠ 1,000 ರೂಪಾಯಿಗಳು ನಿರುದ್ಯೋಗ ಭತ್ಯೆ ಯುವನಿಧಿಯ ವಿಸ್ತರಿಸಿ ಮತ್ತು ಉಳಿದ ಮಕ್ಕಳಿಗೆ 5 ಲಕ್ಷ ರೂಗಳು ಸಹಾಯಧನ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಮಂಜುನಾಥ, ತಾಲೂಕು ಅಧ್ಯಕ್ಷ ರಾಮ ಸಿ, ಪ್ರಧಾನ ಕಾರ್ಯದರ್ಶಿ ರಮೇಶ, ಕಾರ್ಯದರ್ಶಿ ಹೆಚ್.ನೀಲಪ್ಪ, ರಾಜ್ಯಾಧ್ಯಕ್ಷರು ಮಂಜುನಾಥ ದೇವದಾಸಿ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಹುಲಿಗೆಮ್ಮ, ಪದಾಧಿಕಾರಿಗಳಾದ ಪರಶುರಾಮ, ಸೋಮಪ್ಪ, ಲಕ್ಷ್ಮಣ, ವೀರೇಶ, ಚಂದ್ರಶೇಖರ, ರೇಣುಕಾ, ಪಾರ್ವತಿ, ಶಿವಲಿಂಗಮ್ಮ, ಅಮೃತ, ರುದ್ರಮ್ಮ, ಹುಲಿಗೆಮ್ಮ ಇತರರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















