ಬೆಳಗಾವಿ: ದಿನಾಂಕ 13/07/2025 ರಂದು ಬೆಳಿಗ್ಗೆ 11:30ಕ್ಕೆ ಅಥಣಿ ನಗರದ ರಾಯಲ್ ಹಾಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಮಿತಿ ಬೆಂಗಳೂರು, ಚಿಕ್ಕೋಡಿ ಜಿಲ್ಲಾ ಹಾಗೂ ಅಥಣಿ ತಾಲೂಕ ಸಮಿತಿ ವತಿಯಿಂದ ಸಂಘರ್ಷ ರೂವಾರಿ , ದಲಿತ ಚಳುವಳಿಯ ಚೇತನ ಪ್ರೊ. ಬಿ ಕೃಷ್ಣಪ್ಪನವರ 87ನೇ ದಿನಾಚರಣೆಯ ಪ್ರಯುಕ್ತ ಅಥಣಿ ನಗರದ ರಾಯಲ್ ಹಾಲ್ ನಲ್ಲಿ ಸ್ವಾಭಿಮಾನಿ ಸಂಘರ್ಷ ಸಮಾವೇಶ ಏರ್ಪಡಿಸಲಾಗಿತ್ತು.
ದೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಗಣ್ಯ ವ್ಯಕ್ತಿಗಳು ಚಾಲನೆ ಕೊಟ್ಟರು.
ಈ ಸಮಾವೇಶದ ದಿವ್ಯ ಸಾನಿಧ್ಯವನ್ನು ಜ್ಞಾನಜ್ಯೋತಿ ಬಂತೇಜಿ ಗೂಗವಾಡ ಇವರು ವಹಿಸಿಕೊಂಡಿದ್ದರು, ಅತಿಥಿಗಳಾಗಿ ಅಥಣಿಯ ಮಾಜಿ ಶಾಸಕರಾದ ಶಹಜಾನ್ ಡೂ೦ಗರಗಾವ್, ಗೌರವಾನ್ವಿತ ಅತಿಥಿಗಳಾದ ಹಾಗೂ ವಕೀಲರಾದ ಮಿತಿಷ್ ಪಟ್ಟಣ, ಪುರಸಭೆ ಸದಸ್ಯರಾದ ಕಲ್ಲೇಶ್ ಮಡ್ಡಿ, ರಾಜಕೀಯ ಮುಖಂಡರಾದ ಅಸ್ಲಾಂ ನಾಲ್ಬಂದ್, ಬುದ್ಧ ವಿಹಾರ ಸಹ ಕಾರ್ಯದರ್ಶಿಗಳಾದ ಪರಶುರಾಮ್ ಚುಬಚಿ, ಅಥಣಿ ತಾಲೂಕ ಸಂಚಾಲಕರಾದ ಸಾಗರ್ ಕಾಂಬಳೆ, ಮಹಿಳಾ ಒಕ್ಕೂಟದ ಅಥಣಿ ತಾಲೂಕ ಸಂಚಾಲಕರಾದ ಗಂಗಾ ಮಾದರ, ಕಪಿಲ ಘಟಕಾಂಬಳೆ, ಸವಿತಾ ಐಹೊಳೆ, ರವಿ ಬನಸೋಡೆ, ಸಿದ್ಧಾರೂಢ ಕಾಂಬಳೆ, ನಿಂದು ಬನಸೋಡೆ, ಮಚ್ಚೇಂದ್ರ ಹದಗನೂರ್ ಸೇರಿದಂತೆ ಇನ್ನೂ ಅನೇಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಮತ್ತು ಅಪಾರ ಜನಸ್ತೋಮ ಪಾಲ್ಗೊಂಡಿತ್ತು.
ವರದಿಗಾರ. ವಿಠ್ಠಲ ಖೋಕಾಟೆ, ಕರುನಾಡ ಕಂದ ಅಥಣಿ



















