ವಿಜಯಪುರ/ ಇಂಡಿ- ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂ-02 ಶಾಲೆಯಲ್ಲಿ ಇಂದು ದಿ.15.07.2025 ರಂದು ಬೆಳಿಗ್ಗೆ 10ಘಂಟೆಗೆ ಶಾಲಾ ನೂತನ ಎಸ್.ಡಿ.ಎಮ್.ಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ನಡೆಯಿತು. ಈ ಸಭೆಯಲ್ಲಿ ಸಮಿತಿಯ ಅಧ್ಯಕ್ಷೆಯಾಗಿ -ಶ್ರೀಮತಿ ಚೈತನ್ಯ ರೇವರಕರ ಅವರನ್ನು ಸವಾ೯ನುಮತದಿಂದ ಆಯ್ಕೆ ಮಾಡಲಾಯಿತು. ಹಾಗೂ ಉಪಾಧ್ಯಕ್ಷೆಯಾಗಿ ಶ್ರೀ ಮತಿ ಪವಿತ್ರ ಸಚಿನ ಬೊಳೆಗಾಂವ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಅಧ್ಯಕ್ಷೆ ಶ್ರೀಮತಿ ಚೈತನ್ಯ ರೇವರಕರ ಅವರು ಮಾತನಾಡಿ ಯಾವುದೇ ದೇಶ ಪ್ರಗತಿಯಾಗಿದೆ ಅಂದ್ರೆ ಅಲ್ಲಿ ಶಿಕ್ಷಣದ ಪ್ರಗತಿಯಾಗಿದೆ ಎಂದಥ೯, ಅದಕ್ಕಾಗಿ ನಾವೆಲ್ಲರೂ ಮೊದಲು ಶಿಕ್ಷಣಕ್ಕೆ ಒತ್ತು ನೀಡಬೇಕು, ಶಿಕ್ಷಣವೇ ಶಕ್ತಿಯಾಗಿ ಪರಿವತ೯ನೆಯಾಗಬೇಕು ಆ ಕೆಲಸವನ್ನು ನಾವು-ನೀವು ಬೆಂಬಲಿಸಬೇಕು ಆಯ್ಕೆ ಮಾಡಿದ ತಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ತಮ್ಮ ಭಾಷಣವನ್ನು ಮುಗಿಸಿದರು. ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡರಾದ ಭೀಮಾಶಂಕರ ಮೂರಮನ, ಪ್ರಶಾಂತ ಕಾಳೆ, ಸುನೀಲ ಕಾಲೇಬಾಗ, ಸಿದ್ಧಾಥ೯ ಹಳ್ಳದಮನಿ, ಕೇತನ ಕಾಲೇಬಾಗ, ಮಿಲಿಂದ ಹೊಸಮನಿ, ರವಿಕುಮಾರ ಸಿಂಗೆ, ಅಂಬಣ್ಣ ಭಾವಿಕಟ್ಟಿ, ಪರಶುರಾಮ ಕಟ್ಟಿಮನಿ, ಸಚೀನ ಬೊಳೆಗಾಂವ, ಅವಿನಾಶ ಕಾಲೇಬಾಗ ಇತರರು ಉಪಸ್ಥಿತರಿದ್ದರು.
ವರದಿ. ಅರವಿಂದ ಕಾಂಬಳೆ



















