
ಜೆಸ್ಕಾಂ ವ್ಯಾಪ್ತಿಯಲ್ಲಿರುವ ಎಲ್ಲಾ ತೋಟದ ಮನೆಗಳಿಗೆ ಹಾಗೂ ಜಮೀನುಗಳಿಗೆಳಿಗೆ ಸಿಂಗಲ್ ಫೇಸ್ ಹಾಗೂ 7 ತಾಸು ಬದಲಿಗೆ 12 ತಾಸು ಹಗಲು ಹೊತ್ತಿನಲ್ಲಿ ತ್ರೀ ಫೇಸ್ ವಿದ್ಯುತ್ ಸರಬರಾಜು ಕೊಡುವಂತೆ ಒತ್ತಾಯಿಸಿ ರೈತರು,ರೈತ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು.

ಕಲಬುರ್ಗಿ ಜಿಲ್ಲೆಯ ಕಾಳಗಿ ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯಿಂದ ಹಳೆಯ ಬಸ್ ನಿಲ್ದಾಣದಿಂದ ಅಂಬೇಡ್ಕರ್ ಸರ್ಕಲ್ ವರೆಗೆ
ಪ್ರತಿಭಟನೆಯ ಮೂಲಕ ಸಾಗಿ ಬಂದ ಪ್ರತಿಭಟನಾಕಾರರು, ರೈತರು ಜೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಹಲವಾರು ತೋಟದ ಮನೆಗಳಿಗೆ , ಜಮೀನುಗಳಿಗೆ ಮತ್ತು ಊರಿನಿಂದ ದೂರ ಇರುವ ಹೊಲಗಳಲ್ಲಿ ಇರುವ ಮನೆಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜು ಮಾಡಿಕೊಡುವಂತೆ ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ್ ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಈ ಪೂಜ್ಯ ಶಾಂತ ಶ್ರೀ ಸೋಮನಾಥ ಶ್ರೀಗಳು ಮಂಗಲಗಿ, ಶ್ರೀ ಸಿದ್ದಲಿಂಗ ಶಿವಾಚಾರ್ಯರು ಹೊಸಳ್ಳಿ, ಡೊಣ್ಣೂರಿನ ಶ್ರೀಗಳು, ರೇವಣಸಿದ್ದೇಶ್ವರ ಗೌರಿಗುಡ್ಡ ರಟಕಲ್, ವೀರಣ್ಣ ಗಂಗಾಣಿ ತಾಲೂಕ ಅಧ್ಯಕ್ಷರು ರೈತ ಸೇನೆ ಹಾಗೂ ರೈತ ಸಂಘ, ಶಿವರಾಜ್ ಪಾಟೀಲ್ ಗೋಣಿಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ರೈತ ಸೇನೆ, ಮಲ್ಲಿಕಾರ್ಜುನ್ ರೆಡ್ಡಿ ಟ್ರ್ಯಾಕ್ಟರ್ ಶೋರೂಮ್, ಸುಂದರ ಡಿ ಸಾಗರ್, ಆರ್ ಆರ್ ಪಾಟೀಲ್, ರೇವಣಸಿದ್ದಪ್ಪ ಸಾತ್ನೂರ್, ಸೋಮಣ್ಣ ಸಾಹುಕಾರ್, ಸಿದ್ದಯ್ಯ ಮಠಪತಿ, ಶಿವಕುಮಾರ್ ಪಾಟೀಲ್, ಸಿದ್ರಾಮ್ ಪಾಟೀಲ್, ಶಿವಕುಮಾರ ಸುಲೇಪೇಟ, ನಾಗರಾಜ್ ಬೇವಿನ, ಜಾತ್ ಕುಮಾರ್ ಮಂಗಲಗಿ, ಮಲ್ಲಿಕಾರ್ಜುನ ಕೊಡದೂರ್ ಮತ್ತು ಸುತ್ತಮುತ್ತಲಿನ ನೂರಾರು ಗ್ರಾಮದ ರೈತರು, ಯುವಕರು ಭಾಗವಹಿಸಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್



















