ಕಲಬುರಗಿ: ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ( ಕ್ಷೌರಿಕ ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು , ಸಮಾಜ ಸೇವಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಇವರ ಸಮಾಜ ಸೇವೆಯನ್ನು ಗುರುತಿಸಿ ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ ಪ್ರಯಾಗ್ ರಾಜ್ ನ ‘ಜೀವನ ಜಾಗೃತಿ ಸೇವಾ ಸಂಸ್ಥಾನದ ವತಿಯಿಂದ ನ್ಯಾಷನಲ್ ಚಾಣಕ್ಯ ನಾಯಕತ್ವ ಪ್ರಶಸ್ತಿ 2025 ನೇ ಸಾಲಿನ ಪ್ರಶಸ್ತಿಯನ್ನು ಮುಡಿಗೇರಿದೆ.
ಈ ನಿಮ್ಮ ಹಡಪದ ಅಪ್ಪಣ್ಣ ಸಮಾಜದ ಸೇವಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಸಮಾಜದ ಸಂಘಟನಾ ಜೊತೆಯಲ್ಲಿ ಈ ರೀತಿಯ ಸಾಮಾಜಿಕವಾಗಿ ಸೇವೆ ಸಲ್ಲಿಸಿದ್ದಾರೆ ಅನಾಥ ಶಾಲಾ ಮಕ್ಕಳಿಗೆ, ನಿರ್ಗತಿಕರಿಗೆ, ಅಂಧರಿಗೆ, ಬುದ್ದಿ ಮಾಂಧ್ಯರಿಗೆ, ಪೌರ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ , ಅಂಗವಿಕಲರಿಗೆ, ಅನಾಥ ಆಶ್ರಮದ ಹಿರಿಯ ವೃದ್ದರಿಗೆ, ಬಾಲ ಮಕ್ಕಳಿಗೆ, ಸಾಧು-ಸಂತರಿಗೆ, ಮೂಕರಿಗೆ ಕಿವುಡರಿಗೆ ಹೀಗೆ ಒಟ್ಟು 1465 ಕ್ಕೂ ಹೆಚ್ಚು ಅನಾಥರಿಗೆ ಉಚಿತವಾಗಿ ಕ್ಷೌರ ಸೇವೆಯನ್ನು ಸಲ್ಲಿಸಿದನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ತಮ್ಮ ಕಾಯಕ (ಕ್ಷೌರಿಕ) ವೃತ್ತಿಯ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. 18 ವರ್ಷಗಳ ಕಾಲ ತಮ್ಮ ಕ್ಷೌರಿಕ ವೃತ್ತಿಯ ಕಾಯಕ ಮಾಡಿ ಜೀವನದ ಧರ್ಮವಾಗಿ ಅಳವಡಿಸಿಕೊಂಡು, ಅನೇಕ ನಿರ್ಗತಿಕರಿಗೆ, ಈ ಕಲೆಯ ಪ್ರಜ್ವಲನೆಯನ್ನು ಬೆಳಗಿಸಿದ್ದಾರೆ ಇಂದು ನಮ್ಮ ತಂದೆ ಮತ್ತು ಸಮಾಜದ ಹಿರಿಯರ ಮುಖಂಡರ ಮತ್ತು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಪದಾಧಿಕಾರಿ ಅವರ ಮಾರ್ಗದರ್ಶನದಲ್ಲಿ ತಮ್ಮ ಕ್ಷೌರಿಕ ಕಲೆಯನ್ನು ದುಡ್ಡಿನ ವ್ಯಾಪಾರವಲ್ಲ, ಸೇವೆಯ ರೂಪವೆಂದು ನಂಬಿ ಉಚಿತವಾಗಿ ಕ್ಷೌರ ಸೇವೆ ಮಾಡುವ ಮಹಾ ಸೇವೆಯಲ್ಲಿ ತೊಡಗಿದ್ದಾರೆ.
ಕಲೆ ಎಲ್ಲರಿಗೂ ಸಮಾನ ಎಂಬ ಸಾತ್ವಿಕ ದೃಷ್ಟಿಕೋನವು ಅವರ ಗುರುತ್ವದ ಆಧಾರವಾಗಿದೆ. ಅವರ ತಮ್ಮ ವೃತ್ತಿ ಜೀವನ ಶಿಸ್ತಿನೊಂದಿಗೆ ನಾಡಿನ ಸಂಸ್ಕೃತಿಯ ಗಂಭೀರತೆಯನ್ನೂ ಒದಗಿಸುತ್ತದೆ. ಅವರು ಸಂಘಟನೆಯ ಜೊತೆಗೆ ಕೇವಲ ವೃತ್ತಿ ಹವ್ಯಾಸವಲ್ಲ, ಜೀವನವನ್ನೇ ರೂಪಿಸುವ ಶಕ್ತಿ ಎಂದು ನಂಬಿದ್ದಾರೆ.
- ಕರುನಾಡ ಕಂದ



















