ಬಳ್ಳಾರಿ/ ಕಂಪ್ಲಿ: ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ, ಪರಂಪರೆಯ ಪರ ವಕಾಲತ್ತು ವಹಿಸುತ್ತಲೇ ಬಂದಿರುವ ಕನ್ನಡಿಗರ ಹೆಮ್ಮೆಯ ಚಿತ್ರಸಂತೆ ಪತ್ರಿಕೆಯ ಸುದ್ದಿಗಳ ಜೊತೆಗೆ ಅನೇಕ ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಾ ಬಂದಿದೆ. ಸಮಾಜದ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡಿದ ಮಹನೀಯರನ್ನು ಗುರುತಿಸಿ, ಗೌರವಿಸುವ ಕಾರ್ಯವನ್ನೂ ಮಾಡುತ್ತಿದೆ, ಬೆಂಗಳೂರಿನ ಸದಾಶಿವನಗರದ ಹೈಡ್ ಪಾರ್ಕ್ ಹೋಟೆಲ್ ನಲ್ಲಿ ಚಿತ್ರಸಂತೆ ಪತ್ರಿಕೆಯ 13ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ನಗರದ ರಾಷ್ಟ್ರದ ಜಾಗೃತಿ ಮ್ಯಾರಾಥಾನ್ ಓಟಗಾರ ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್ ದೂರಗಳ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಮೋಹನ್ ಕುಮಾರ್ ದಾನಪ್ಪನವರ ಸಮಾಜ ಸೇವೆ ಮತ್ತು ಕ್ರೀಡಾ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ” ವರ್ಷದ ಕನ್ನಡಿಗ 2025 ” ಪ್ರಶಸ್ತಿಯನ್ನು ಚಿತ್ರಸಂಸ್ಥೆ ಪತ್ರಿಕೆಯ ಸಂಪಾದಕರು ಹಾಗೂ ಚಲನಚಿತ್ರದ ನಿರ್ಮಾಪಕ ನಿರ್ದೇಶಕರಾದ ಗಿರೀಶ್ ವಿ ಗೌಡ, ದಿನೇಶ್ ಗುರೂಜಿ, ದೂರ ತೀರ ಯಾನ ಚಿತ್ರದ ನಿರ್ಮಾಪಕ ಆರ್. ದೇವರಾಜ್, ನಟ ವಿಜಯ್ ಕೃಷ್ಣ, ನಿರ್ದೇಶಕ ಮನಸುರೆರವರು ಪ್ರಧಾನ ಮಾಡಿದರು.
ವರದಿ : ಜಿಲಾನಸಾಬ್ ಬಡಿಗೇರ




















