
ಬೆಳಗಾವಿ/ ಅಥಣಿ : ನಗರದ ಸಾಯಿ ನಗರ ಮತ್ತು ವೈಭವ ನಗರದಲ್ಲಿರುವ ರಸ್ತೆಗಳು ನೋಡಿದರೆ ಇದು ಡಾಂಬರೀಕರಣ ರಸ್ತೆನಾ ಅಥವಾ ಮಣ್ಣಿನ ರಸ್ತೆನಾ ಎನ್ನುವುದೇ ಗೊತ್ತಾಗ್ತಾ ಇಲ್ಲ.
ಏಕೆಂದರೆ ನಳದ ಜೋಡಣೆಯ ಸಲುವಾಗಿ ರಸ್ತೆ ಬದಿ ಅಗಿದು ಪೈಪನ್ನು ಹಾಕಿ ಮುಚ್ಚಲಾಗಿದೆ, ಆದರೆ ರಸ್ತೆ ಮೇಲಿದ್ದ ಮಣ್ಣು ಹಾಗೆ ಇದ್ದು, ಅದು ಮಳೆ ಬಂದಾಗ ಕೆಸರಾಗಿ ವಾಹನಗಳು ಜಾರುತ್ತಿವೆ ಇದರಿಂದ ಅನಾಹುತಗಳಾಗುವ ಸಂಭವ ಬಹಳ ಇರುತ್ತದೆ.
ದಿನಾಲೂ ಬೆಳಗ್ಗೆ ಎಲ್ಲಾ ಶಾಲೆಯ ವಾಹನಗಳು ಇದೇ ರಸ್ತೆಯಿಂದ ಅಂದರೆ ಚರ್ಚ್ ಮುಂದಿರುವಂತಹ ರಸ್ತೆ ಹಾಗೂ ಬಸವ ಉದ್ಯಾನವನದಿಂದ ಆದರ್ಶ ಶಾಲೆಗೆ ಹೋಗುವ ರಸ್ತೆ ಪೂರ್ತಿ ಹಾಳಾಗಿದ್ದು ಮಣ್ಣಿನ ರಸ್ತೆಯಾಗಿ ಪರಿವರ್ತನೆಗೊಂಡಿದೆ.
ಸಾಯಿ ನಗರ ಮತ್ತು ವೈಭವ ನಗರಗಳಲ್ಲಿ ಡಾಂಬರೀಕರಣ ಅಥವಾ ಸಿ ಸಿ ರಸ್ತೆನೆ ಇಲ್ಲ ಎಲ್ಲವೂ ಕೂಡ ಮಣ್ಣಿನ ರಸ್ತೆನೆ ಆಗಿವೆ. ಇದರಿಂದ ಬಹಳ ತೊಂದರೆಗಳಾಗುತ್ತಿದೆ, ಇದರಿಂದ ವೃದ್ಧರು ಬೆಳಗ್ಗೆ ಎದ್ದು ವಾಕಿಂಗ್ ಮಾಡಲು ಹೋಗಲು ಅವರಿಗೆ ಬಹಳ ಅನಾನುಕೂಲವಾಗುತ್ತಿದೆ.
ಇಲ್ಲಿ ನೂರಾರು ಮನೆಗಳಿದ್ದು ಇಲ್ಲಿ ಗಟಾರದ ವ್ಯವಸ್ಥೆ ಕೂಡಾ ಇಲ್ಲ. ಇಲ್ಲಿ ಯಾವ ವ್ಯವಸ್ಥೆ ಇಲ್ಲದಿದ್ದರೂ ಕೂಡ ಪುರಸಭೆಯವರು ತೆರಿಗೆ ಮಾತ್ರ ವಸೂಲಿ ಮಾಡುತ್ತಾರೆ.
ಇದರಿಂದ ತಕ್ಷಣ ಪುರಸಭೆಯವರು ಎಚ್ಚೆತ್ತುಕೊಂಡು ಇದರ ಕಡೆ ಗಮನಹರಿಸಬೇಕು ಯಾವುದೇ ಅನಾಹುತಗಳು ಆಗುವುದಕ್ಕೆ ಮುಂಚೆ ಇದರ ಕಡೆ ಗಮನ ಕೊಡಿ.
ವರದಿ ವಿಠ್ಠಲ ಖೋಕಾಟೆ ಅಥಣಿ



















