ಮೈಸೂರು : ಹಂಡಿತವಳ್ಳಿ ಗ್ರಾಮ ಪಂಚಾಯಿತಿಯ ಆಶ್ರಯ ಯೋಜನೆಯಲ್ಲಿ ಬ್ಯಾಂಕ್ ಆಫ್ ಬರೋಡಾ ರಾವಂದೂರ್ ಇವರು ಜನ ಸುರಕ್ಷತಾ ಯೋಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಾನ್ಯ ಪ್ರಧಾನಮಂತ್ರಿ ಸುರಕ್ಷಾ ಯೋಜನೆ ಬಗ್ಗೆ ಅರಿವು ಮತ್ತು ಇರುವ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿ ಜನರಲ್ಲಿ ಜಾಗೃತಿ ಮೂಡಿಸಿ ಜನರಿಗೆ ಹೆಚ್ಚು ಅನುಕೂಲವಾಗುವಂತೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ವಿಠ್ಠಲ್ ರಾಥೋಡ್ ರವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದ ಯೋಜನೆ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದಂತಹ ಅನಿಲ್ ಕುಮಾರ್ ರವರು ಜನರಿಗೆ ಇದರ ಬಗ್ಗೆ ಮಾಹಿತಿ ಉಪಯುಕ್ತ ಕಾರ್ಯಕ್ರಮಗಳು ಇದರ ಅರಿವು ಸುರಕ್ಷತೆ ಬಗ್ಗೆ ತಿಳಿಸಿದರು, ನಂತರ ಬ್ಯಾಂಕ್ ಆಫ್ ಬರೋಡಾ ಮೈಸೂರು ವಲಯದ ಅಧಿಕಾರಿಗಳಾದ ನಿಶಾಂತ್ ರವರು ಮಾತನಾಡಿ ಬಿ ಎಂ ಜೆ ಬಿ ವೈ ಇದರ ಬಗ್ಗೆ ನಿಮ್ಮ ವಯಸ್ಸಿಗೆ ಅನುಗುಣವಾಗಿ ಯಾವ ಯೋಜನೆಗೆ ಎಷ್ಟು ಹಣ ಸಿಗುತ್ತದೆ ಮತ್ತು ನಾವು ಎಷ್ಟು ಹಣವನ್ನು ನೀಡಬೇಕು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ವಿವರವಾಗಿ ತಿಳಿಸಿದರು ಇದರೊಂದಿಗೆ ಜನರು ಹೆಚ್ಚು ಅನುಕೂಲ ಮಾಡಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಹಂಡಿತವಳ್ಳಿ ಗ್ರಾಮ ಪಂಚಾಯಿತಿ ಬಿ. ಸಿ ಸಂತೋಷ್ ಕುಮಾರ್ ರವರು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸ್ವಾಮಿಗೌಡ ಅವರು ಪಂಚಾಯತಿ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತರು ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಮದ ಯಜಮಾನರು ಮಹಿಳೆಯರು ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ ಹೆಚ್.ಆರ್.ಶಂಕರ್



















