ವರದಿಯ ಹಿನ್ನಲೆಯಲ್ಲಿ ಮುಸ್ಲೇಪಲ್ಲಿ ಅಂಗನವಾಡಿ ಕೇಂದ್ರಕ್ಕೆ ಅಧಿಕಾರಿಗಳ ಭೇಟಿ, ಸಮಸ್ಯೆಗೆ ಪೂರ್ಣವಿರಾಮ.
ಗುರುಮಠಕಲ್/ಮಿನಸಪೂರ್: ಗುರುಮಠಕಲ್ ತಾಲೂಕಿನ ಮಿನಸಪೂರ್ ಗ್ರಾಮ ಪಂಚಾಯತಿಯಲ್ಲಿ ವ್ಯಾಪ್ತಿಯಲ್ಲಿ ಬರುವ ಮುಸ್ಲೇಪಲ್ಲಿ ಗ್ರಾಮದ ಅಂಗನವಾಡಿ ಕೇಂದ್ರ ಕಳೆದ ಒಂದು ವಾರದಿಂದ ಗ್ರಾಮಸ್ಥರು ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಗೊಂದಲದಿಂದ ಬೇಸತ್ತ ಗ್ರಾಮಸ್ಥರು ಒಂದು ವಾರದಿಂದ ಅಂಗನವಾಡಿ ಬೀಗ ಹಾಕಿರುವುದು ಈಗ ಚರ್ಚೆಗೆ ಕಾರಣವಾಗಿತ್ತು,
ಗಡಿ ಭಾಗದ ಮುಸ್ಲೇಪಲ್ಲಿ ಅಂಗನವಾಡಿ ಶಾಲೆಗೆ ಹಿಡಿದ ಗ್ರಹಣ ಎಂಬ ವರದಿಯ ಹಿನ್ನಲೆಯಲ್ಲಿ ಇಂದು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಬಸಪ್ಪ, ಮೇಲ್ವಿಚಾರಕರಾದ ಗೌರಮ್ಮ ಹಿರೇಮಠ, ಗ್ರಾಮದ ಅಭಿವೃದ್ಧಿ ಅಧಿಕಾರಿ ಸರೋಜ ಮತ್ತು ಗ್ರಾಮ ಲೆಕ್ಕಾಧಿಕಾರಿ ಸಿದ್ದು ಭೇಟಿ ನೀಡಿ ಇಂದು ಅಂಗನವಾಡಿ ಕೇಂದ್ರದ ಬೀಗ ತೆಗೆದು ಅಲ್ಲಿನ ಸಮಸ್ಯೆಗೆ ಪರಿಷ್ಕಾರ ನೀಡಿದ್ದಾರೆ.
ಅಲ್ಲಿನ ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಚೌಡಮ್ಮ ಮಾತಾನಾಡಿ ಇಂದು ಅಂಗನವಾಡಿ ಕೇಂದ್ರದ ಬೀಗ ಹಾಗೂ ಅಂಗನವಾಡಿ ಸೀಲ್, ಮೊಬೈಲ್ ನೀಡಿ ಕೆಲಸ ನಿರ್ವಹಿಸಲು ಸೂಚಿಸಿದ್ದಾರೆ, ಕರುನಾಡ ಕಂದ ಪತ್ರಿಕೆಯ ವರದಿಯಿಂದಾಗಿ ಮೇಲಾಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಕಾರಣೀಕರ್ತರಾದ ಸಂಪಾದಕರಿಗೆ, ವರದಿಗಾರರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ವರದಿ ಜಗದೀಶ್ ಕುಮಾರ್ ಭೂಮಾ




















