ಶ್ವಾನದಳದ ‘ನಿಷ್ಟಿ’ ಸಹಕಾರದೊಂದಿಗೆ ಹುಂಡಿ ಪತ್ತೆ 19 ಲಕ್ಷ 43 ಸಾವಿರ ರೂಪಾಯಿ ಮೌಲ್ಯದ ಹಣ ಮತ್ತು ದೇವಸ್ಥಾನದ ಒಡವೆ ವಶ
ಯಾದಗಿರಿ/ ಗುರುಮಠಕಲ್: ತಾಲ್ಲೂಕಿನ ಗುಂಜನೂರು ಗ್ರಾಮದ ಗುಂಜಲಮ್ಮ ದೇವಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕಳುವಾಗಿದ್ದು, ಶರಣಗೌಡ ಬಸನಗೌಡ ಮಾಲಿಪಾಟೀಲ ಅವರ ದೂರಿನ ಮೇರೆಗೆ ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಗಿತ್ತು, ದೇವಸ್ಥಾನದ ಹುಂಡಿ ಗ್ರಾಮದ ಬಯಲು ಪ್ರದೇಶದಲ್ಲಿ ಮಂಗಳವಾರ ಪತ್ತೆಯಾಗಿದೆ.
ಕಳುವಾದ ಹಣ ಮತ್ತು ವಸ್ತುಗಳ ಮಾಹಿತಿ.
1) ನಗದು ಹಣ ರೂ 10,50,000/-(ಹತ್ತು ಲಕ್ಷದ ಐವತ್ತು ಸಾವಿರ ರೂಪಾಯಿ),
2) ಬಂಗಾರದ ಸರ 40 ಗ್ರಾಂ ಅಂದಾಜು ರೂ. 2,80,000/-
3) ತಲಾ 10 ಗ್ರಾಂ ಬಂಗಾರದ 2 ಬೋರಮಳ ಸರ ಅಂದಾಜು ರೂ 1.40,000/-
4) 20 ಗ್ರಾಂ ಬಂಗಾರದ ತಾಳಿ ಸರ ಅಂದಾಜು ರೂ. 1,40,000/-
5) 10 ಗ್ರಾಂ ಬಂಗಾರದ ನೆಕ್ಲೆಸ್ ಅಂದಾಜು ರೂ. 70,000/-,
6) ತಲಾ 3 ಗ್ರಾಂ 3 ಬಂಗಾರದ ಮೂಗುತ್ತಿ ಅಂದಾಜು ರೂ 63,000/-
7) ತಲಾ 5 ಗ್ರಾಂ 2 ಬಂಗಾರದ ಹಣೆಪಟ್ಟಿ, ಅಂದಾಜು ರೂ 70,000/-.
8) 10 ಗ್ರಾಂ ಬಂಗಾರದ ಚಂದ್ರಹಾರ ಅಂದಾಜು ರೂ 70,000/-,
9) 1 ಕೆ.ಜಿ ಬೆಳ್ಳಿ ಆಭರಣಗಳು ಅಂದಾಜು ರೂ 60,000/-
ಒಟ್ಟು 19,43,000/-
ಕಳವು ದೂರು ಮಂಗಳವಾರ ಎಸ್ ಪಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಎಸ್ ಪಿ ಧರಣೇಶ, ಡಿವೈಎಸ್ಪಿ ಸುರೇಶ ಎಂ, ಪಿಐ ವೀರಣ್ಣ ದೊಡ್ಡಮನಿ ಹಾಗೂ ತಂಡ ಪರಿಶೀಲನೆ ನಡೆಸಿತ್ತು. ಸೋಮನಗೌಡ ನೇತೃತ್ವದಲ್ಲಿ ಶ್ವಾನದಳದ ‘ನಿಷ್ಟಿ’ ಸಹಕಾರದೊಂದಿಗೆ ಹುಂಡಿ ಪತ್ತೆ ಹಚ್ಚಲಾಗಿದೆ.
ಎಲ್ಲಾ ನಗ-ನಾಣ್ಯ ಸಿಕ್ಕಿದ್ದು, ಕಳ್ಳರಿಗಾಗಿ ಶೋಧ ಕಾರ್ಯ ಗುರುಮಠಕಲ್ ಪೊಲೀಸ್ ಠಾಣೆಯ ಕಾರ್ಯಚರಣೆ ನಡೆದಿದೆ.
ಠಾಣೆಯ ಪಿ.ಐ ವೀರಣ್ಣ ದೊಡ್ಡಮನಿ, ಮಹಿಪಾಲರೆಡ್ಡಿ, ಚಂದ್ರರೆಡ್ಡಿ, ಶರಣು ಪಸಾರ, ವಿಶ್ವನಾಥರೆಡ್ಡಿ, ಶಿವರಾಮರೆಡ್ಡಿ, ರಹೀಮ್, ರಮೇಶರೆಡ್ಡಿ, ನರೇಂದ್ರ ರೆಡ್ಡಿ, ಅಶೋಕ ಮತ್ತಿತರರು ಗ್ರಾಮಸ್ಥರ ಸಮ್ಮುಖದಲ್ಲಿ ಗಲ್ಲಪೆಟ್ಟಿಗೆ ತೆರೆದು ಪರಿಶೀಲಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ




















