ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾನೂನು ಕವಚ :ಮಕ್ಕಳಿಂದ ಅಪರಾಧ ಮಾಡಿಸಿದವರಿಗೆ ಹತ್ತು ವರ್ಷಗಳವರೆಗಿನ ಜೈಲು ಶಿಕ್ಷೆ

18 ವರ್ಷಗಳ ಒಳಗಿನ ಮಕ್ಕಳನ್ನು ಅಪರಾಧ ಮಾಡಲು ನೇಮಿಸಿಕೊಳ್ಳುವುದು ಅಥವಾ ತೊಡಗಿಸಿಕೊಳ್ಳುವುದು ಮಾಡಿದರೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

ಅಪರಾಧ ಕೃತ್ಯವನ್ನು ಮಾಡಲು ಸಿದ್ದರಾಗಿರುವ ಕ್ರಿಮಿನಲ್ ಗಳು ಅಪರಾಧ ಮಾಡಿ ಕಾನೂನಿನ ಪ್ರಕಾರ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಾರೆ, ಆಗ ಅವರಿಗೆ ಬರಬಹುದಾದಂತಹ ಮೊದಲ ಯೋಚನೆಯೇ 18 ವರ್ಷಗಳ ಒಳಗಿನ ಮಕ್ಕಳನ್ನು ಬಳಸಿ ಅಪರಾಧ ಕೃತ್ಯವನ್ನು ಮಾಡಿಸುವುದು. ಇಂತಹ ಕೃತ್ಯಗಳನ್ನು ಇಲ್ಲವಾಗಿಸಲು, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 95 ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ ಹಾಗೂ ಈ ಕೃತ್ಯಕ್ಕೆ ದಂಡನೆಯನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ ಹೊಸದಾಗಿ ಸೇರಿಸಲಾಗಿದೆ.

ಅಪರಾಧ ಮಾಡಲು 18 ವರ್ಷಗಳ ಒಳಗಿನ ಮಕ್ಕಳನ್ನು ( ಹೆಣ್ಣು ಅಥವಾ ಗಂಡು ) ನೇಮಿಸಿಕೊಳ್ಳುವ, ಅಥವಾ ತೊಡಗಿಸಿಕೊಂಡವರಿಗೆ ಭಾರತ ನ್ಯಾಯ ಸಂಹಿತೆ, ಸೆಕ್ಷನ್ 95 ಪ್ರಕಾರ ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಆದರೆ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಹಾಗೆಯೇ ಆ ಅಪರಾಧ ಕೃತ್ಯ ಮಕ್ಕಳಿಂದ ನಡೆದರೆ, ಆ ಅಪರಾಧಕ್ಕೆ ಒದಗಿಸಲಾದ ಶಿಕ್ಷೆಯೊಂದಿಗೆ ” ಮಕ್ಕಳನ್ನು ಅಪರಾಧ ಕೃತ್ಯ ಮಾಡಲು ನೇಮಿಸಿಕೊಂಡಂತಹ ವ್ಯಕ್ತಿಗೆ ” ಶಿಕ್ಷೆ ವಿಧಿಸಲಾಗುತ್ತದೆ, ಆ ಅಪರಾಧವನ್ನು ಅಂತಹ ವ್ಯಕ್ತಿಯೇ ಮಾಡಿದ್ದಾನೆ ಎಂಬಂತೆ ಅಂದರೆ “ಮಕ್ಕಳನ್ನು ಅಪರಾಧ ಕೃತ್ಯ ಮಾಡಲು ನೇಮಿಸಿಕೊಂಡಂತಹ ವ್ಯಕ್ತಿಗೆ ” ಮಕ್ಕಳು ಮಾಡಿದ ಅಪರಾಧ ಕೃತ್ಯವನ್ನು ಮಾಡಿದ್ದಾನೆ ಎಂಬಂತೆ ಆಗುತ್ತದೆ.

ಉದಾಹರಣೆ : 18 ವರ್ಷಗಳ ಒಳಗಿನ ಮಕ್ಕಳನ್ನು ಯಾರನ್ನಾದರೂ ಹೊಡೆಯಲು ನೇಮಿಸುವುದು.

ಯಾರೇ ಆಗಲಿ 18 ವರ್ಷಗಳ ಒಳಗಿನ ಮಕ್ಕಳನ್ನು ಯಾರನ್ನಾದರೂ ಹೊಡೆಯಲು ನೇಮಿಸಿ ಆ ಮಕ್ಕಳು ಹೋಗಿ ಆ ವ್ಯಕ್ತಿಗೆ ಹೊಡೆದರೆ, ಹೊಡೆತ ತಿಂದಂತಹ ವ್ಯಕ್ತಿ ಮರಣ ಹೊಂದಿದರೆ, ಮಕ್ಕಳನ್ನು ನೇಮಿಸಿದಂತಹ ವ್ಯಕ್ತಿಗೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ( ಸಾಯುವವರೆಗೂ ಜೈಲು ಶಿಕ್ಷೆ ) ವಿಧಿಸಲಾಗುತ್ತದೆ.

ಒಂದುವೇಳೆ, ಆ ಮಕ್ಕಳು ಕೊಲ್ಲುವ ಪ್ರಯತ್ನ ಮಾಡಿದರೆ, ಮಕ್ಕಳನ್ನು ನೇಮಿಸಿದಂತಹ ವ್ಯಕ್ತಿಗೆ ಕೊಲೆ ಯತ್ನಕ್ಕಾಗಿ ಹತ್ತು ವರ್ಷಗಳವರೆಗಿನ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಜೊತೆಗೆ ಈ ಸೆಕ್ಷನ್ ನ ಅಡಿಯಲ್ಲೂ ಹತ್ತು ವರ್ಷಗಳವರೆಗಿನ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಲೈಂಗಿಕ ಶೋಷಣೆ ಅಥವಾ ಅಶ್ಲೀಲತೆಗಾಗಿ ಮಕ್ಕಳನ್ನು ನೇಮಿಸಿಕೊಳ್ಳುವುದು, ತೊಡಗಿಸಿಕೊಳ್ಳುವುದು ಅಥವಾ ಬಳಸುವುದು ಮಾಡಿದರೆ, ಭಾರತ ನ್ಯಾಯ ಸಂಹಿತೆ ಪ್ರಕಾರ ” ಲೈಂಗಿಕ ಶೋಷಣೆ ಅಥವಾ ಅಶ್ಲೀಲತೆ ” ಗೆ ಇರುವಂತಹ ದಂಡನೆಗೆ ಮಕ್ಕಳನ್ನು ನೇಮಿಸಿದಂತಹ ವ್ಯಕ್ತಿ ಗುರಿಯಾಗುತ್ತಾನೆ ಜೊತೆಗೆ ಈ ಸೆಕ್ಷನ್ ನ ಅಡಿಯಲ್ಲಿಯೂ ಸಹ ಹತ್ತು ವರ್ಷಗಳ ವರೆಗಿನ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾನೆ.

ಕೃತ್ಯ ಎಸಗಿದ ಮಕ್ಕಳಿಗೂ ಬಾಲಾಪರಾಧ ಕಾಯ್ದೆ ಅಡಿಯಲ್ಲಿ ಕಾನೂನು ರೀತಿಯ ವಿಚಾರಣೆ ನಡೆಯುವುದು ಹಾಗೂ ಕ್ರಮ ಕೈಗೊಳ್ಳಲಾಗುವುದು ಮತ್ತು ಅತ್ಯಂತ ಘೋರ ಅಪರಾಧಗಳಲ್ಲಿ ಭಾಗಿಯಾದ 16 ವರ್ಷದಿಂದ 18 ವರ್ಷದವರೆಗಿನ ಮಕ್ಕಳನ್ನು ವಯಸ್ಕರೆಂದು ಪರಿಗಣಿಸಿ ಅವರಿಗೂ ಭಾರತೀಯ ನ್ಯಾಯ ಸಂಹಿತೆ ಪ್ರಕಾರ ಶಿಕ್ಷೆಯನ್ನು ವಿಧಿಸಲಾಗುವುದು.

– ಕಿರಣ್ ಕೆ.ಟಿ,

– ವಕೀಲರು, ತುಮಕೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!