ಬಳ್ಳಾರಿ/ ಕಂಪ್ಲಿ : ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ 2025ರ ಇಂದಿನಿಂದ ನಿತ್ಯ ಸಂಜೆ 6.30ರಿಂದ 63ನೇವರ್ಷದ ಮಹಾಮಹಿಮ ಪವಾಡಪುರುಷ ಕಲಬುರ್ಗಿ ಶ್ರೀಶರಣಬಸವೇಶ್ವರ ಲೀಲಾಮೃತ ಪುರಾಣ ಪ್ರವಚನ ಪ್ರಾರಂಭಗೊಂಡಿತು.
ಶ್ರಾವಣಮಾಸಪೂರ್ತಿ ಗದುಗಿನ ಗವಿಸಿದ್ಧೇಶ್ವರ ಶಾಸ್ತಿಗಳು ಪುರಾಣ ಪ್ರಸ್ತುತಪಡಿಸಿದರು. ರಾರಾವಿಯ ಬಿ.ಚಿದಾನಂದಪ್ಪ ಗವಾಯಿಗಳಿಂದ ಸಂಗೀತ, ಹಂಪಿ ಕನ್ನಡ ವಿವಿಯ ಶಿಕ್ಷಕ ಶ್ರೀಕೆ.ದೊಡ್ಡಬಸಪ್ಪರಿಂದ ತಬಲವಾದನ ಸೇವೆ ಜರುಗೀತು.
ಈ ಸಂದರ್ಭದಲ್ಲಿ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆಡಳಿತ ಮಂಡಳಿಯವರು ವೀರಶೈವ ಸಮಾಜದ ಹಿರಿಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















