ಬೆಂಗಳೂರಿನ ಚೈತನ್ಯ ಇಂಟೆರ್ ನ್ಯಾಷನಲ್ ಫೌಂಡೇಶನ್ ಸಂಸ್ಥೆಯು ನಿನ್ನೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಹಾಸನದ ಸಮಾಜಸೇವಕ, ಪರಿಸರ ಪ್ರೇಮಿ ಎಂ. ಸಿ. ರಾಜು ಅವರಿಗೆ ಚಾಣಕ್ಯ ಅಂತರ ರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಡಾ. ಭೇರ್ಯ ರಾಮ ಕುಮಾರ್, ಸಮಾಜ ಸೇವಕಿ ಡಾ. ಸೌಜನ್ಯ ಶರತ್, ಡಾ. ವಸುಧ ಶ್ರೀನಿವಾಸ್, ರವಿಕುಮಾರ್, ಸಮಾಜಸೇವಕ ನೀಲಕಂಠ ಆಡಿಗ ವೇದಿಕೆಯಲ್ಲಿದ್ದರು.
- ಕರುನಾಡ ಕಂದ



















