ಬಳ್ಳಾರಿ/ ಕಂಪ್ಲಿ : ಇಲ್ಲಿನ ವಾಲ್ಮೀಕಿ ಸರ್ಕಲ್ ಬಳಿ ನಟ ಯುವ ರಾಜಕುಮಾರ್ ಅಭಿಮಾನಿ ದೇವರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕದಾದ್ಯಂತ ಚಿತ್ರಮಂದಿಗಳಲ್ಲಿ ‘ಎಕ್ಕ’ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು ಅದರ ಪ್ರಯುಕ್ತ ನಾಯಕ ನಟ ಯುವ ರಾಜ್ ಕುಮಾರ್ ಭಾನುವಾರ ಗಂಗಾವತಿಗೆ ಭೇಟಿ ನೀಡಿ ಬಳ್ಳಾರಿಗೆ ತೆರಳುವ ಮಾರ್ಗ ಮತ್ತೆ ಕಂಪ್ಲಿಯ ವಾಲ್ಮೀಕಿ ಸರ್ಕಲ್ ನಲ್ಲಿ ಅಭಿಮಾನಿಗಳ ಅಭಿಮಾನಕ್ಕೆ ಮನಸೋತು ತಮ್ಮ ಕಾರನ್ನು ನಿಲ್ಲಿಸಿ ಅಭಿಮಾನಿಗಳ ಕೈಬೀಸಿ ಕೃತಜ್ಞತೆ ಸಲ್ಲಿಸಿ ಬಳ್ಳಾರಿಗೆ ತೆರಳಿದರು.
ಅಭಿಮಾನಿಗಳ ನೂಕು ನುಗ್ಗಲಿನ ಕಾರಣ ಕಾರಿನ ಮೇಲೆ ಏರಿ ಕುಳಿತು ಅಭಿಮಾನಿಗಳಿಗೆ ಕೈ ಬೀಸಿದರು. ಅಭಿಮಾನಿಗಳು ಅಪ್ಪು ಹಾಗೂ ಯುವ ಹೆಸರನ್ನು ಕೂಗಿ ಜೈಕಾರ ಹಾಕಿದರು. ನೂಕು ನುಗ್ಗಲು ಉಂಟಾದ್ದರಿಂದ ಪೊಲೀಸರು ಜನರ ಗುಂಪನ್ನು ನಿಯಂತ್ರಿಸಿದರು.
ವರದಿ : ಜಿಲಾನಸಾಬ್ ಬಡಿಗೇರ



















