ಬಳ್ಳಾರಿ/ ಕಂಪ್ಲಿ : ಭಾರತದಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಬ್ಬ ವಾಹನ ಚಾಲಕ ಹೆಲ್ಮೆಟ್ ಧರಿಸಿ ತಮ್ಮ ಪ್ರಾಣ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಪಿ ಐ ಕೆ.ಬಿ.ವಾಸುಕುಮಾರ ಹೇಳಿದರು. ಪಟ್ಟಣದ ಪೊಲೀಸ್ ಠಾಣೆ ಅವರಣದಲ್ಲಿ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ನೇತೃತ್ವದಲ್ಲಿ ಉಚಿತವಾಗಿ ಹೆಲ್ಮೆಟ್ ವಿತರಿಸಿದರು ನಂತರ ಕೆ.ಬಿ.ವಾಸುಕುಮಾರ ಮಾತನಾಡಿ, ಬೈಕ್ ಸವಾರರು ಕಡ್ಡಾಯ ಹೆಲ್ಮೆಟ್ ಧರಿಸಿ ಸವಾರಿ ಮಾಡಬೇಕು ಇದರಿಂದ ತಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗುವುದರ ಜೋತೆಗೆ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗುತ್ತದೆ. ಅತಿ ಹೆಚ್ಚಾಗಿ ಹೆಲ್ಮೆಟ್ ಇಲ್ಲದೇ ಅಪಘಾತದಲ್ಲಿ ಅನೇಕ ಜನರು ಜೀವ ಬಿಟ್ಟಿದ್ದಾರೆ. ಆದ್ದರಿಂದ ಯುವಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಉಳಿಸಿಕೊಳ್ಳಬೇಕು ಎಂದರು. ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ವಾಹನ ಚಲಾವಣೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು ಅಂದಾಗ ಅಪರಾಧಗಳು ಕಡಿಮೆ ಆಗಲು ಸಾಧ್ಯ ಚಿಕ್ಕ ಮಕ್ಕಳಿಗೆ ವಾಹನ ಚಲಾಯಿಸಲು ಕೊಡಬೇಡಿ, ಲೈಸೆನ್ಸ್ ಇಲ್ಲದೇ ವಾಹನ ಚಲಾವಣೆ ಮಾಡುವುದು ಕಾನೂನು ಬಾಹಿರವಾಗಿದ್ದು, ಕಾನೂನನ್ನು ಪಾಲಿಸುವುದು ಎಲ್ಲರ ಕರ್ತವ್ಯ, ಹೆಲ್ಮೆಟ್ ಧರಿಸುವುದು ಚಾಲಕರ ಹಿತದೃಷ್ಟಿಯಿಂದ ಉತ್ತಮ. ಹೆಚ್ಚಿನ ಅಪಘಾತ ಸಂದರ್ಭದಲ್ಲಿ ಚಾಲಕರು ತಲೆಗೆ ಪೆಟ್ಟು ಬಿದ್ದು ಅಸುನೀಗಿದ್ದು ಹೆಚ್ಚು ಅದಕ್ಕಾಗಿ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡಬೇಕು ಎಂದರು. ಇಲ್ಲಿನ ಒಟ್ಟು 75 ಜನ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ಹೆಲ್ಮೆಟ್ ವಿತರಿಸಿದರು.
ಈ ಸಂದರ್ಭದಲ್ಲಿ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪುರಸಭೆ ಸದಸ್ಯ ಲಡ್ಡು ಹೊನ್ನೂರವಲಿ, ಮುಖಂಡ ಪೇಂಟರ್ ಮಸ್ತಾನ್, ಜಿಲ್ಲಾ ಸಮಾಧೀಷ್ಟರಾದ ಎಮ್ಮಿಗನೂರು ಶೇಕ್ ಸಾಬ್, ಗೃಹ ರಕ್ಷಕದಳ ಪ್ರಭಾರಿ ಘಟಕಾಧಿಕಾರಿ ಹೊನ್ನೂರವಲಿ, ಪಿಎಲ್ಸಿ ಘಟಕಾಧಿಕಾರಿ ಹೆಚ್.ಗಿರಿಧರ್, ಸೆಕ್ಷನ್ ಲೀಡರ್ ಗಳಾದ ಕೆ.ಜಗದೀಶ, ಬಿ.ಚಂದ್ರಶೇಖರ, ಎ ಎಸ್ ಎಲ್ ಗಳಾದ ಎ.ನಾರಾಯಣ ಸೇರಿದಂತೆ ಸಿಬ್ಬಂದಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















