ಬೀದರ್: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕರ್ನಾಟಕ ರಾಜ್ಯ ಮಧ್ಯಪಾನ ಸ್ವಯಂ ಮಂಡಳಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ವಿಜಯ ಮಹಾಂತ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೊಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು. ಪರಿಸರ ಸಂರಕ್ಷಣೆ ಪ್ಲಾಸ್ಟಿಕ್ ಮುಕ್ತ ಜಿಲ್ಲೆಗೆ ಕರೆ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಈಶ್ವರ ಖಂಡ್ರೆ ಹೇಳಿದರು. ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯನ್ನು ರಾಜ್ಯ ಸರ್ಕಾರ ವ್ಯಸನ ಮುಕ್ತ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.
ಡಾ. ಮಹಾಂತ ಶಿವಯೋಗಗಳು ಜಮಖಂಡಿ ತಾಲೂಕಿನ ಹಿಪ್ಪರಗಿಯಲ್ಲಿ ಆಗಸ್ಟ್ ಒಂದು 1931 ರಲ್ಲಿ ಜನಿಸಿದರು. 1970ರಲ್ಲಿ ಮುಕ್ತ ಸಮಾಜ ನಿರ್ಮಾಣಕ್ಕೆ ದೊಡ್ಡ ಸಂಕಲ್ಪ ತೊಟ್ಟು 1974ರಲ್ಲಿ ಮಹಾಂತಜೋಳಿಗೆ ದುಶ್ಚಟಗಳ ಭಿಕ್ಷೆ ಎಂಬ ವಾಕ್ಯದೊಂದಿಗೆ ಆಂದೋಲನ ಆರಂಭಿಸಿದರು. ಆಂದೋಲನ ಪರಿಣಾಮವಾಗಿ ಅನೇಕರು ವ್ಯಸನಗಳಿಂದ ಆಚೆ ಬಂದು ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ ಎಂದು ಮಾನ್ಯ ಸಚಿವರು ಅರಣ್ಯ, ಪರಿಸರ ಮತ್ತು ಜಿವಶಾಸ್ತ್ರ ಸಚಿವರು ಈಶ್ವರ ಖಂಡ್ರೆ ತಿಳಿಸಿದರು. ಜಿಲ್ಲೆಯ ಗಿಡಮರಗಳನ್ನು ಬೆಳೆಸಿ ಹಸಿರು ಹೊದಿಕೆ ಹೆಚ್ಚಿಸಿ ಪರಿಸರ ಸಂರಕ್ಷಣೆ ಮಾಡಬೇಕು ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಲು ಎಲ್ಲರೂ ಕೈಜೋಡಿಸಿ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಒಳಪಡುತ್ತಿದ್ದಾರೆ ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಯುವಕರು ಧೂಮಪಾನ ಮಧ್ಯಪಾನಗಳನ್ನು ಬಿಟ್ಟು ಆರೋಗ್ಯವಂತ ಜೀವನ ಕಟ್ಟಿಕೊಳ್ಳಬೇಕು ಮೊಬೈಲ್ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಶಿಕ್ಷಣ, ಕ್ರೀಡೆ, ಯೋಗಾಸನದಂತಹ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ದೇಶದ ಒಳಿತಿಗಾಗಿ ಕೊಡುಗೆ ನೀಡಬೇಕು. ಮನೋವೈದ್ಯ ತಜ್ಞರಾದ ಡಾಕ್ಟರ್ ರಾಘವೇಂದ್ರ ವಾಗೋಲ್ ಉಪನ್ಯಾಸ ನೀಡಿ ಮಾದಕ ವಸ್ತುಗಳ ಬಳಕೆಯಿಂದ ನಮ್ಮ ಮೆದುಳು ಹಾಗೂ ನರಮಂಡಲದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು ಮಾದಕ ದ್ರವ್ಯಗಳಾದ ತಂಬಾಕು, ಆಲ್ಕೋಹಾಲ್, ಗಾಂಜಾ, ಹೆರಾಯಿನ್, ಮುಂತಾದವುಗಳನ್ನು ಸ್ನೇಹಿತರ ಪ್ರಚೋದನೆಯಿಂದ ಪ್ರಾರಂಭವಾಗಿರುತ್ತದೆ ನಂತರ ದಿನಗಳಲ್ಲಿ ದೇಹದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ ಇದರಿಂದಾಗಿ ಕ್ಯಾನ್ಸರ್ ಮತ್ತು ಇತರೆ ರೋಗಗಳು ಬರುವ ಸಾಧ್ಯತೆಗಳು ಹೆಚ್ಚಾಗಿದ್ದು ದುಶ್ಚಟಗಳಿಂದ ದೂರವಿರಬೇಕು ಎಂದರು.
ಜಿಲ್ಲಾಧಿಕಾರಿ ಶ್ರೀಮತಿ ಶಿಲ್ಪ ಶರ್ಮ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸುಳ್ಳೊಳ್ಳಿ, ವಿಜಯ್ ಮಹಾಂತೇಶ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜಪ್ಪ ಮಾಶಟ್ಟಿ, ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಮಹೇಶ್ ಮಾಶೆಟ್ಟಿ, ಪ್ರಶಾಂತ್ ಮಾಶೆಟ್ಟಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಪ್ನಾ ಮಾಶೆಟ್ಟಿ ನಿವೃತ್ತ ಪ್ರಾಚಾರ್ಯರು ಹಾಗೂ ಕ ಸಾ ಪ ಕೊಶಾಧ್ಯಕ್ಷರಾದ ಶಿವಶಂಕರ್ ಟೋಕರೆ ಮೊರಾರ್ಜಿ ಕಾಲೇಜಿನ ಪ್ರಾಂಶುಪಾಲರಾದ ಚನ್ನಬಸವ ಹೆಡೆ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಜಯ ಕೃಷ್ಣ ಸೋಲ್ಪುರ್ ಸಪ್ತಗಿರಿ ಕಾಲೇಜಿನ ಆಂಗ್ಲ ಉಪನ್ಯಾಸಕರಾದ ಸಾಗರ ಪಡಸಲೆ, ಸ್ವಾಮಿ ನರೇಂದ್ರ ಕಾಲೇಜಿನ ಉಪನ್ಯಾಸಕರಾದ ಆನಂದ ಗುಪ್ತ ಶಶೌಕಾಂತ ಹುಮನಾಬಾದೆ ಪನ್ನಲಾಲ ಹಿರಾಲಾಲ ಕಾಲೇಜಿನ ಉಪನ್ಯಸಕಿಯರಾದ ಶ್ರೀಮತಿ ಸುಮತಿ ಮೆಡಂ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಯುವ ಪೀಳಿಗೆಗೆ ಜಾಗ್ರೃತಿ ಮೂಡಿಸಲು ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು ಪ್ರಬಂಧ ಸ್ಪರ್ಧೆಯಲ್ಲಿ ಸಪ್ತಗಿರಿ ಪ.ಪೂ ಕಾಲೇಜಿನ ವಿದ್ಯರ್ಥಿನಿಯಾದ ದಿಕ್ಷಾ ಪ್ರಥ್ವಿರಾಜ ಅವರಿಗೆ ಪ್ರಥಮ ಬಹುಮಾನ ನೀಡಿ ಸತ್ಕರಿಸಲಾಯಿತು ಮತ್ತು ಸಂದೇಶ್, ರಾಜ್ಕುಮಾರ್, ಶಿವಕುಮಾರ್,ದಶರತ್, ಸ್ವಯಂ, ವಿಜಯ್ ಕುಮಾರ್, ರೆಡ್ಸನ್,ರವೀಂದ್ರ, ಭಗವಂತ್, ವೈಜಿನಾಥ್ , ಮನೀಶ್,ನವೀನ್ ಕುಮಾರ್
ಕಿರಣ್,ಗಣಪತಿ, ಅಮಿತ್,ಅಂಕುಶ್ ,ಜಗನಾಥ್
ದಿನೇಶ್,ಅನಿಲ್ ಕುಮಾರ್, ಚಂದ್ರಪಾಲ್, ಪಾಲರಾಜ್, ರಾಹುಲ್,ಬಕ್ಕಪ್ಪ, ಗೊವಿಂದ, ದೀಪಕ್,ಸುಭಾಷ್ , ಶಿವಶಂಕರ್,ಅನಿಲ್ ಕುಮಾರ್ , ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೂ ಕೂಡಾ ಪ್ರಮಾಣ ಪತ್ರ ವಿತರಿಸಲಾಯಿತು.
ವರದಿ: ಸಾಗರ ಪಡಸಲೆ



















