
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಜಲಜೀವನ್ ಮಿಷನ್ (JJM) ಕಾಮಗಾರಿಯು ಕಳಪೆ ಕಾಮಗಾರಿಯಾಗಿದೆ ಎಂದು ಆರೋಪಿಸಿ ದಲಿತ ಮುಖಂಡರಿಂದ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಚಿಕ್ಕೋಡಿ ಇವರಿಗೆ ಘೇರಾವ್ ಹಾಕಿದರು. ಅಭಿಯಂತರರು ಅಲ್ಲಿಯೇ ತಮ್ಮ ಸರ್ಕಾರಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ಇದರಿಂದ ಆಕ್ರೋಶಗೊಂಡ ದಲಿತ ಮುಖಂಡರು ಕಾರಿನ ಮುಂದೆ ಧರಣಿ ಕುರಿತು ಪ್ರತಿಭಟನೆ ನಡೆಸಿದರು.
ತಕ್ಷಣಕ್ಕೆ ಅಥಣಿ ಪೊಲೀಸರು ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಿ ಪ್ರತಿಭಟನೆಯನ್ನು ತಿಳಿಗೊಳಿಸಿದರು.
ನಂತರ ಅಥಣಿಯ ಅಧಿಕಾರಿಗಳಾದ ರವೀಂದ್ರ ಮುರುಗಾಲಿ ಮತ್ತು ಅಕ್ಷಯ ಚಿನಮೂರಿ ಆಗಮಿಸಿ ಕಾಮಗಾರಿಯನ್ನು ವೀಕ್ಷಿಸಿ ನಾವು ಕಾಮಗಾರಿಯನ್ನು ವ್ಯವಸ್ಥಿತವಾಗಿ ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಇದರಿಂದ ತಕ್ಷಣ ಪ್ರತಿಭಟನಾಕಾರರು ತಾವು ಮಾಡುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸಿದರಲ್ಲದೆ ಕಾಮಗಾರಿ ವ್ಯವಸ್ಥಿತವಾಗಿ ಆಗದಿದ್ದರೆ ನಾವು ತಹಸಿಲ್ದಾರ್ ಅವರಿಗೆ ಈ ಕಾಮಗಾರಿಯ ಕುರಿತು ಮನವರಿಕೆ ಮಾಡಿ ಅಲ್ಲಿ ಕೂಡಾ ಧರಣಿ ಕುಳಿತುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದೇ ಪ್ರತಿಭಟನೆ ವೇಳೆಯಲ್ಲಿ ಮುಖಂಡರಾದ ಡಾಕ್ಟರ್ ಗೌತಮ್ ಬನಸೋಡೆ , ಅಜೀತ್ ಶಿಂಧೆ ,
ಭೀಮ ಘರ್ಜನೆಯ ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಚಿನ ಕಾಂಬಳೆ, ಭೀಮ ಘರ್ಜನೆಯ ಅಥಣಿ ತಾಲೂಕಾ ಅಧ್ಯಕ್ಷರಾದ ಕುಶಪ್ಪ ಬನಸೋಡೆ, ಸಂತೋಷ ಕಾಂಬಳೆ, ಶ್ರೀಕಾಂತ ದಳವಾಯಿ ರಾಜೇಶ್ ಸಿಂಗೆ ಕಾರ್ತಿಕ್ ಕಾಂಬಳೆ, ಸುಧೀರ ಶಿಂಧೆ, ಇನ್ನು ಅನೇಕ ಪ್ರಮುಖ ವ್ಯಕ್ತಿಗಳು ಉಪಸ್ಥಿತರಿದ್ದರು.
ವರದಿಗಾರ. ವಿಠ್ಠಲ ಖೋಕಾಟೆ ಕರುನಾಡ ಕಂದ ಅಥಣಿ.



















