ಯಾದಗಿರಿ/ಗುರುಮಠಕಲ್: ತಾಲೂಕಿನ ತಹಶೀಲ್ದಾರ್ ಗಳಾದ ಶಾಂತಗೌಡ ಬಿರಾದರ ಅವರಿಗೆ ತಮ್ಮ ಕಚೇರಿ ಸಿಬ್ಬಂದಿ ಪಹಣಿ, ಇನ್ನಿತರ ಕೆಲಸದ ನಿಮಿತ್ಯ ಬಂದ ಸಾರ್ವಜನಿಕರಿಗೆ ಸರಿಯಾದ ಪ್ರತಿಕ್ರಿಯೆ ನೀಡದಿರುವ ಹಾಗೂ ಸಭೆ, ಕಾರ್ಯಕ್ರಮಗಳ ಕುರಿತು ಸರಿಯಾದ ಮಾಹಿತಿ ಸಂಘಟನೆ ಹಾಗೂ ಪತ್ರಕರ್ತರಿಗೆ ನೀಡದೆ ಶಿಷ್ಟಾಚಾರದ ಉಲ್ಲಂಘನೆ ಮಾಡಿರುವುದರ ಕುರಿತಾಗಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಿನ ಅಧ್ಯಕ್ಷ ಶರಣಬಸಪ್ಪ ಎಲ್ಹೇರಿ ತಿಳಿಸಿದರು. ಅದಕ್ಕೆ ಉತ್ತರವಾಗಿ ತಹಶೀಲ್ದಾರ್ ಅವರು ಇದು ಮತ್ತೆ ಪುನರಾವರ್ತನೆ ಆಗದಂತೆ ಸಿಬ್ಬಂದಿಗೆ ಎಚ್ಚರಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ವರ್ತಿಸಲು ಸೂಚನೆ ನೀಡಿದರು.
ರೈತರಿಗೆ ಯೂರಿಯಾ, ರಸಗೊಬ್ಬರ ಕೊರತೆ ಸೇರಿದಂತೆ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಾಗೂ ಗ್ರಾಮೀಣ ಭಾಗದಲ್ಲಿ ತೆಲಂಗಾಣದಿಂದ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ತಂದು ಅಕ್ರಮ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮನವಿ ನೀಡಿದರು.
ಗುರುಮಠಕಲ್ ತಾಲೂಕಿನ ಗೌರವ ಅಧ್ಯಕ್ಷರಾದ ಭೀಮಶಂಕರ್ ಪಡಿಗೆ, ಮೌನೇಶ್ ಮಾದವರ್, ಶರಣು ಮೇಧಾ, ಮಹೇಶ್ ಅಳಿಗೆರಾ, ಬನ್ನು ಕಾಳಬೆಳಗುಂದಿ, ವೆಂಕಟೇಶ್ ಚಿಟಿಕೆನಪಲ್ಲಿ, ಜಗದೀಶ್ ನಸಲ್ ವಾಯಿ, ಕಾಶೀನಾಥ್ ರಾಥೋಡ್, ದೇವಾಸಿಂಗ್, ತಾಯಪ್ಪ, ವೆಂಕಟೇಶ್ ಬೋಯಿನ, ಅನಿಲ್ ಹಿಮ್ಲಾಪೂರ್ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮ



















