ಬಳ್ಳಾರಿ/ ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ನಡೆದ ಪೋಷಕರ ಸಭೆಯಲ್ಲಿ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎಸ್ ಡಿ ಎಂ ಸಿ ರಚನೆ ಶುಕ್ರವಾರ ಮಾಡಲಾಯಿತು.
ಹುಲುಗಪ್ಪ ಕಣ್ಣೀರ್ (ಅಧ್ಯಕ್ಷ), ಹೆಚ್.ಅಂಬಿಕ(ಉಪಾಧ್ಯಕ್ಷ), ಹೆಚ್.ಪಕ್ಕೀರಪ್ಪ, ಯಲಿಗೆಮ್ಮ, ಮೌನೇಶ, ಶರಣಮ್ಮ ಸಿ.ಡಿ. ರಮೇಶ ಸಿ.ಡಿ, ನಾಗರಾದ ಹೆಚ್, ಜಿ.ಮಲ್ಲಿಕಾರ್ಜುನ, ಕುಂಬಾರ ವೆಂಕಟೇಶ, ಈರಮ್ಮ ಸಿದ್ದಲಿಂಗಸ್ವಾಮಿ, ಎ.ಸುಮಂಗಳ, ಕಡೆಮನಿ ಯೋಗಪ್ಪ, ನಾಡಿಗರ ಕಮಲಮ್ಮ, ಹೆಚ್.ಬಸಪ್ಪ, ಹೆಚ್.ಜಡೆಪ್ಪ, ಕವಿತ ಹನುಮಯ್ಯ, ಹೊನ್ನೂರಸಾಬ್ (ಸದಸ್ಯರು), ಕೆ.ಶಂಕರ, ಹೆಚ್.ಕುಮಾರಸ್ವಾಮಿ, ಹೆಚ್ ಹಂಪಾರೆಡ್ಡಿ (ನಾಮ ನಿರ್ದೇಶನ ಸದಸ್ಯರು) ಇವರು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಂತರ ನೂತನ ಅಧ್ಯಕ್ಷ ಹುಲುಗಪ್ಪ ಕಣ್ಣೀರ್ ಮಾತನಾಡಿ, ಪ್ರತಿಯೊಬ್ಬರ ಸಹಕಾರದಿಂದ ಅಧ್ಯಕ್ಷ ಸ್ಥಾನ ದೊರೆತಿದ್ದು, ಎಲ್ಲರ ಪ್ರೀತಿ, ವಿಶ್ವಾಸದೊಂದಿಗೆ ಶಾಲೆಯ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಶ್ರಮಿಸಲಾಗುವುದು. ಇಲ್ಲಿನ ಪ್ರೌಢಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕೊಠಡಿಗಳ ಅವಶ್ಯಕತೆ ಇದ್ದು, ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಗಮನ ಹರಿಸಿ, ಹೊಸ ಕೊಠಡಿಗಳಿಗೆ ಅನುದಾನ ನೀಡಬೇಕು ಹಾಗೂ ಶಾಲಾ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ನೂತನ ಎಸ್ಸಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರಿಗೆ ಮಾಲಾರ್ಪಣೆಯೊಂದಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಹೊಸಕೋಟೆ ಜಗದೀಶ, ಮುಖ್ಯಗುರುಗಳಾದ ನಿರ್ಮಲಾ, ವಿ.ಆರ್.ಮೂರ್ತಿ, ಮುಖಂಡರಾದ ಹೆಚ್. ಶಿವಾನಂದ, ಹೆಚ್.ಶಿವಕುಮಾರ. ಕೆ.ರಾಜಪ್ಪ, ಕೆಕೆ ದೊಡ್ಡಪ್ಪ, ಶಿವುಕುಮಾರಸ್ವಾಮಿ, ಸಿ.ಡಿ.ರಾಜಶೇಖರ, ಹೆಚ್.ಜಡೆಪ್ಪ, ಎನ್.ಪವನ್, ನೆಣಕಿ ಗಿರೀಶ್, ಹೆಚ್.ಕುಮಾರಸ್ವಾಮಿ, ಹೆಚ್.ಜಗದೀಶ, ಗಂಗಾಧರ. ಹೆಚ್.ಪಕ್ಕೀರಪ್ಪ, ಹೆಚ್.ತಿಪ್ಪಯ್ಯ, ಹೆಚ್.ಮಾಯಪ್ಪ, ಹೆಚ್.ಜಡೆಪ್ಪ, ಬಂಡೆ ವಿರೇಶ, ಬಿ.ಗಿರಿಯಪ್ಪ, ಗಾದಿಗಿ ವೆಂಕಟೇಶ, ಗಾದಿಗಿ ದೊಡ್ಡಬಸಪ್ಪ ಹಾಗೂ ಶಿಕ್ಷಕರಾದ. ಚಂದಪ್ಪ ಕಂಬಳಿ, ಮಡಿವಾಳ ಸೇರಿದಂತೆ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















