ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಮಲೆ ಮಹದೇಶ್ವರ ಕೃತಿ ಲೋಕಾರ್ಪಣೆ

ಚಾಮರಾಜನಗರ: ಮಲೈಮಹದೇಶ್ವರ ಬೆಟ್ಟದ ಗುರುಸ್ವಾಮಿ ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಭಾಗವಹಿಸಿ ಶ್ರೀ ಮಲೆ ಮಹದೇಶ್ವರ ಕೃತಿ ಲೋಕಾರ್ಪಣೆ ಮಾಡಿ ನಂತರ ಮಾತನಾಡಿ ಸಾಲೂರು ಬೃಹನ್ ಮಠಕ್ಕೂ ಶ್ರೀ ಕ್ಷೇತ್ರಕ್ಕೂ ಹಿರಿಯ ಶ್ರೀಗಳಾಗಿದ್ದ  ಗುರುಸ್ವಾಮಿರವರಿಗೆ ಅವಿನಾಭಾವ ಸಂಬಂಧ ಇದೆ ಅವರು ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮದ ವೇಳೆ ಎಚ್ ಎ ಎಲ್ ಸಂಸ್ಥೆಯ ಸಹಕಾರದೊಂದಿಗೆ 4.70 ಕೋಟಿ ವೆಚ್ಚದಲ್ಲಿ ವಿಧ್ಯಾರ್ಥಿ ನಿಲಯದ ಶಂಕುಸ್ಥಾಪನೆ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಗುರುಸ್ವಾಮಿರವರು ಮಲೆ ಮಹದೇಶ್ವರ ಬೆಟ್ಟದ  ಸುತ್ತಮುತ್ತಲಿನ ಪ್ರದೇಶದಲ್ಲಿರುವ ಬೇಡಗಂಪಣರು ಹಾಗೂ ಆದಿವಾಸಿ ಬುಡಕಟ್ಟು ಜನಾಂಗದರಿಗೆ ದಾರಿದೀಪವಾಗಿದ್ದರು ಇವರ ಜೀವನವೇ ನಮಗೆ ಅದರ್ಶವಾಗಿದೆ. ಅವರ ಹಾದಿಯಲ್ಲಿಯೇ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿರವರು ತಮ್ಮ ಗುರುಗಳನ್ನು ತಂದೆಯವರ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶ್ರೀಕ್ಷೇತ್ರ ಸುತ್ತೂರು ಜಗದ್ಗುರು ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳು,ಶ್ರೀ ಆದಿಚಂಚನಗಿರಿ ಮಹಾಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳು,ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠದ ಶ್ರೀಮಹಾಂತಸ್ವಾಮಿಗಳು, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು,ಕುಂದೂರು ಮಠದ ಡಾ.ಶ್ರೀ ಶರತ್ ಚಂದ್ರ ಸ್ವಾಮಿಗಳು,ಹರಿಹರ ವೀರಶೈವ ಲಿಂಗಾಯತ ಮಠದ ಶ್ರೀ ವಚನಾನಂದ ಸ್ವಾಮಿಗಳು,ಸಿದ್ದಗಂಗಾ ಸ್ವಾಮಿಗಳು,ಶ್ರೀ ಪುರುಷೋತ್ತಮ ಸ್ವಾಮಿಗಳು, ಡಾ.ಶ್ರೀ ಮುಮ್ಮಡಿ ಶಿವರುದ್ರಸ್ವಾಮಿಗಳು,ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್ ಎಂ ಗಣೇಶ್ ಪ್ರಸಾದ್,ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಆರ್ ಕೃಷ್ಣಮೂರ್ತಿ, ಅಂದಿಯೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಜಿ ವೆಂಕಟಾಚಲಂ, ಹೆಚ್ ಎ ಎಲ್ ಅಧ್ಯಕ್ಷಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಡಿ.ಕೆ ಸುನಿಲ್ , ಎಚ್ ಎ ಎಲ್ ನಿರ್ದೇಶಕರಾದ ರವಿ,ಎಂ.ಜಿ ಬಾಲಸುಬ್ರಹಣ್ಯ, ಚಾಮುಲ್ ಅಧ್ಯಕ್ಷರಾದ ನಂಜುಂಡಸ್ವಾಮಿ,ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ದತ್ತೇಶ್ ಕುಮಾರ್,ಪ್ರಾಧಿಕಾರದ ಕಾರ್ಯದರ್ಶಿ ರಘು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!