ಯಾದಗಿರಿ/ಸುರಪುರ :ಪವಿತ್ರ ಶ್ರಾವಣ ಮಾಸದ ಅಂಗವಾಗಿ ತಾಲ್ಲೂಕಿನ ಕೆ. ತಳ್ಳಳ್ಳಿ ಗ್ರಾಮದ ಯುವಕರು ಬಸವ ಮಾಲಾ ಧಾರಣೆ ಮಾಡಿದರು.
ಸೋಮವಾರ ಬೆಳಗ್ಗಿನ ಜಾವ ಬಾವಿಯಲ್ಲಿ ಮಿಂದೆದ್ದು ಶ್ವೇತ ವಸ್ತ್ರ ಧರಿಸಿ ಜಾಲಿಬೆಂಚಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಾಲಾ ಧಾರಣೆ ಮಾಡಿದರು.
ವೇ.ಮೂ.ಅಮರಯ್ಯ ಸ್ವಾಮಿ ಜಾಲಿಬೆಂಚಿ ಹಾಗೂ ವೆ.ಮೂ. ಬಸಯ್ಯ ಸ್ವಾಮಿಗಳು ಜೊತೆಗೂಡಿ ಮಾಲಾ ಧಾರಿಗಳಿಗೆ ಮಾಲೆ ಧಾರಣೆ ಮಾಡುವ ಮೂಲಕ ಇಷ್ಟ ಲಿಂಗ ಪೂಜಾ ಕೈಂಕರ್ಯ ಹಾಗೂ ಮಾಲಾ ಧಾರಣೆ ನಿಯಮಗಳನ್ನು ತಿಳಿಸಿಕೊಟ್ಟರು.
ಮಾಲಾ ಧಾರಿಗಳೆಲ್ಲ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಹಾ ಪ್ರಸಾದ ಸವಿದರು.
ಈ ಸಂದರ್ಭದಲ್ಲಿ ಶರಣಗೌಡ ವಡಿಗೇರಿ,ಚನ್ನಗೌಡ ಚನ್ನೂರ, ಅಶೋಕ ಕಾಕರಗಲ್ಲ, ರಾಘವೇಂದ್ರ ಮಾಸ್ತರ,ನಾಗರಾಜ ಪತ್ತಾರ, ಕುಮಾರ ದೊರೆ, ಕರಿಬಸಪ್ಪಗೌಡ ಚನ್ನೂರ,ದೇವಣ್ಣ, ಶ್ರೀಕಾಂತ್, ವಿಶ್ವರಾಧ್ಯ, ಆನಂದ,ಶಿವರಾಜ, ಶರಣಗೌಡ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ



















