
ಯಾದಗಿರಿ/ ಗುರುಮಠಕಲ್: ಪಟ್ಟಣದ ಲಕ್ಷ್ಮೀ ನಗರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಷ.ಬ್ರ.108 ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಳಖೇಡ ಶ್ರೀಗಳ ಸಮ್ಮುಖದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ ಜರುಗಿತು.
ಬುದ್ದಿವಂತಿಕೆ ಮತ್ತು ಜ್ಞಾನದ ಸಂಕೇತವಾಗಿರುವ ಅಕ್ಷರಾಭ್ಯಾಸವನ್ನು 2 ವರ್ಷದಿಂದ 6 ವರ್ಷದ ವರೆಗಿನ ಮಕ್ಕಳೊಂದಿಗೆ ಸುಮಾರು 20ಕ್ಕೂ ಹೆಚ್ಚು ಪೋಷಕರು ಪಾಲ್ಗೊಂಡಿದ್ದರು.
ಹಿಂದೂ ಧರ್ಮದ ಪದ್ಧತಿಗಳಲ್ಲಿ ಅಕ್ಷರಭ್ಯಾಸ ಮಹತ್ವದ ಪಾತ್ರ ವಹಿಸಿದ್ದು, ಬುದ್ದಿ ಕರ್ಮ ಫಲದಿಂದ ಕೂಡಿದ್ದು, ಶ್ರಾವಣ ರಾಜಯೋಗದಲ್ಲಿ ಮಕ್ಕಳ ಅಕ್ಷರಬ್ಯಾಸದಿಂದ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಬಿ. ಬಿ ಸ್ವಾಮಿ, ಬಾಲಪ್ಪ ದಾಸರಿ,ಪನ್ನ ಲಾಲ್ ಪಟೇಲ್, ಸಿದ್ರಾಮ ಸ್ವಾಮಿ, ಬಸ್ಸಪ್ಪ ಸಂಜನೊಳ, ಪ್ರವೀಣ್ ಪಟೇಲ್, ಮಲ್ಲಿಕಾರ್ಜುನ ಕಾಕಲವರ್, ಮೋಹನ್ ರೆಡ್ಡಿ, ಬಾಲಪ್ಪ ಸಿರಿಗೆಂ, ಶಿವ ಕುಮಾರ್ ಜಡಾರ, ವಿಜಯ ಕುಮಾರ್ ಅಲೆಮಾನಿ, ಮಂಜುನಾಥ್ ಮನ್ನೇ , ಜಗದೀಶ್ ಶಹಾಪೂರ್ ಕರ್ ಸೇರಿದಂತೆ ಇನ್ನೂ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾದರು.
ವರದಿ: ಜಗದೀಶ್ ಕುಮಾರ್ ಭೂಮಾ



















