ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆಳಗೋಡ್‌ಹಾಳ್ ಸರ್ಕಾರಿ ಶಾಲೆಗೆ ನೂತನ ಎಸ್ಡಿಎಂಸಿ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಸಿ.ಮಲ್ಲಯ್ಯ, ಉಪಾಧ್ಯಕ್ಷರಾಗಿ ಬಿ.ನಾಗರತ್ನ

ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬೆಳಗೋಡ್‌ಹಾಳ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಪೋಷಕರ ಸಭೆಯಲ್ಲಿ ನೂತನ ಎಸ್ ಡಿ ಎಂ ಸಿ ರಚಿಸುವ ಜೊತೆಗೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರನ್ನು ಬುಧವಾರ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಿ.ಮಲ್ಲಯ್ಯ, ಉಪಾಧ್ಯಕ್ಷರಾಗಿ ಬಿ.ನಾಗರತ್ನಮ್ಮ, ಸದಸ್ಯರಾಗಿ ಪಿ.ವೆಂಕಟೇಶ, ಬಿ.ಕಿಂಕರಿ, ಪಿ.ಸುನಿತಾ, ಟಿ.ದುರುಗಪ್ಪ, ರೇಖಮ್ಮ, ಭಾಗ್ಯಮ್ಮ, ಜ್ಯೋತಿ, ಎನ್.ಲಕ್ಷ್ಮೀ, ಹುಸೇನ್‌ಪೀರ, ಚಾಂದ್ ಬೀ, ಎ.ರಮೇಶ, ಬಿ.ನಾರಾಯಣ, ಕೆ.ಸಂಧ್ಯಾ, ಕೆ.ಮಂಜಮ್ಮ, ಮೇಟಿ ಶಿವಕುಮಾರ, ಎಂ.ಮಲ್ಲೇಶ ಇವರು ಸರ್ವಾನುಮತದಿಂದ ಆಯ್ಕೆಯಾದರು.
ನಂತರ ಮುಖ್ಯಗುರು ಟಿ.ಎಚ್.ಮರಿಸ್ವಾಮಿ ಮಾತನಾಡಿ, ಮೂರು ವರ್ಷದ ಅವಧಿಗೆ ನೂತನ ಎಸ್ಡಿಎಂಸಿ ರಚಿಸಲಾಯಿತು. ಶಾಲೆಯ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ನೂತನ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರತಿಯೊಬ್ಬರು ಸಹಕರಿಸಬೇಕು. ವಿದ್ಯಾರ್ಥಿಗಳ ಪ್ರಗತಿಗೆ ಹಾಗೂ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಶ್ರಮಿಸೋಣ ಎಂದರು.
ನಂತರ ನೂತನ ಆಡಳಿತ ಮಂಡಳಿಯ ಸರ್ವ ಸದಸ್ಯರಿಗೆ ಮಾಲಾರ್ಪಣೆಯೊಂದಿಗೆ ಗೌರವಿಸಿದರು.

ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯ ಎಸ್.ಚಂದ್ರಶೇಖರಗೌಡ, ಮುಖಂಡರಾದ ನಾಗರಾಜ ನಾಯಕ, ಬಿ.ಓಂಕಾರಿ, ಬಿ.ಡೊಡ್ಡಬಸಪ್ಪ, ಪಂಪನಗೌಡ, ಕೆ.ರಾಜಪ್ಪ, ವೈ.ಲೋಕರಾಜ್, ಜಿ.ಓಂಕಾರಗೌಡ, ನಬೀಸಾಬ್, ಬಿ.ಆನಂದ, ಸಿ.ರಾಮಪ್ಪ, ಪರಮೇಶ, ಸಹ ಶಿಕ್ಷಕರಾದ ಶಂಕರಮೂರ್ತಿ, ಹೆಚ್.ಎಂ.ವಿರೇಶ, ವೈ.ತಿಪ್ಪಮ್ಮ, ವಿ.ಸಾವಿತ್ರಿ, ಬಿ.ಮಂಗಳ, ಶಶಿಕಲಾ(ಅತಿಥಿ ಶಿಕ್ಷಕಿ) ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!