ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಾನ್ಯ ಮುಖ್ಯ ಮಂತ್ರಿಗಳಿಗೆ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.
ಯಾದಗಿರಿ: ಎಸ್.ಸಿ.ಎಸ್.ಪಿ.- ಟಿ.ಎಸ್.ಪಿ ಕಾಯ್ದೆ 2013 ನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಅವಕಾಶಗಳನ್ನು ಶಾಸನಬದ್ದವಾಗಿ ಹೊಂದಲು ರಾಜ್ಯ ಸರ್ಕಾರಗಳು ಕಾಯ್ದೆ ರೂಪಿಸಿದೆ ಈ ಕಾಯ್ದೆಯ ಕಲಂ 7ಡಿ ಮತ್ತು 7ಸಿ ರಲ್ಲಿ ಕಾಯ್ದೆಯಡಿ ನಿಗಧಿಪಡಿಸಿದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಸರ್ಕಾರಗಳು ವಂಚಿಸುತ್ತಿವೆ. ಆದ್ದರಿಂದ 7ಡಿ ಮತ್ತು 7ಸಿ ಕಲಂಗಳನ್ನು ರದ್ದು ಮಾಡಿ 7ಡಿ ರದ್ದು ಮಾಡಿ 7ಸಿ ಯನ್ನು ಯಥಾಪ್ರಕಾರ ಉಳಿಸಿಕೊಂಡು ಅನ್ಯ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಪರಿಶಿಷ್ಟರಿಗೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಅವಕಾಶವನ್ನು ಸರ್ಕಾರಗಳೇ ನೇರವಾಗಿ ಅಸ್ಪೃಶ್ಯ ಆಚರಣೆ ಮಾಡುತ್ತಿದೆ ಮತ್ತೆ ಮೊಸಳೆ ಕಣ್ಣೀರನ್ನು ಸುರಿಸುತ್ತಿರುವುದನ್ನು ನಿಲ್ಲಿಸಿ ನಯ ವಂಚನೆ ಮಾಡದೆ ಪರಿಶಿಷ್ಟರ ಹಣವನ್ನು ಪರಿಶಿಷ್ಟರಿಗೆ ಮೀಸಲಿಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತಾ ಅನ್ಯ ಕಾರ್ಯಗಳಿಗೆ ಬಳಸಿರುವ ಹಣವನ್ನು ವಾಪಸ್ ಪಡೆದು ಪರಿಶಿಷ್ಟ ಅಭಿವೃದ್ಧಿಗಾಗಿ ಉಪಯೋಗಿಸಬೇಕೆಂದು ಒತ್ತಾಯಿಸುತ್ತಾ, 38 ಇಲಾಖೆಗಳಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬುವ ಮೂಲಕ ದಲಿತರ ಏಳಿಗೆಗಾಗಿ ಮುಂದಾಗಲು, ಪರಿಶಿಷ್ಟರ ಹಣವನ್ನು ಬಳಕೆ ಮಾಡದೆ ನಿರ್ಲಕ್ಷತೆ ವಹಿಸಿ ಸರ್ಕಾರಕ್ಕೆ ವಾಪಸ್ ಕಳುಹಿಸುವ ಮತ್ತು ಅನ್ಯಕಾರ್ಯಗಳಿಗೆ ಬಳಸುವ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಮುಖ್ಯಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಕಲಂ 7ಸಿ ರದ್ದು ಪಡಿಸಿ ವಿವಿಧ ಇಲಾಖೆಗಳ ಮೂಲಕ ಅನ್ಯ ಯೋಜನೆಗಳಿಗೆ ಅನುದಾನ ನೀಡುತ್ತಿರುವುದನ್ನು ತಕ್ಷಣ ತಡೆಯುವಂತೆ ಒತ್ತಾಯಿಸಿ, “ಪರಿಶಿಷ್ಟರ ಹಣ ಪರಿಶಿಷ್ಟರಿಗಾಗಿ ಮಾತ್ರ” ನೀಡುವ ಬಗ್ಗೆ ಪ್ರತಿಭಟನೆ ಮೂಲಕ ಇಂದು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ಮಾನ್ಯ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಯಿತು.
ಪ್ರಮುಖ ಹಕ್ಕೊತ್ತಾಯಗಳು :
1] ಎಸ್.ಸಿ.ಎಸ್.ಪಿ- ಟಿ.ಎಸ್.ಪಿ. 2013ಕಾಯ್ದೆಯ ಕಲಂ 7ಸಿ ಕೂಡಲೇ ರದ್ದುಗೊಳಿಸಬೇಕು ಹಾಗೂ ವಿವಿಧ ಇಲಾಖೆಗಳ ಮೂಲಕ ಅನ್ಯ ಯೋಜನೆಗಳಿಗೆ ಉಪ ಯೋಗಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾಯ್ದೆ ಕಲಂ 24 ರಡಿಯಲ್ಲಿ ಪ್ರಕರಣ ದಾಖಲಿಸಿ ಕಾರಾಗೃಹಕ್ಕೆ ಕಳುಹಿಸಬೇಕು.
2] ಸರ್ಕಾರದ 38 ಇಲಾಖೆಗಳ ಬ್ಯಾಕ್ಲಾಗ್ ಹುದ್ದೆಗಳ ಕುರಿತಂತೆ ಅಂಕಿ ಅಂಶ ನೀಡದಿರುವ ಇಲಾಖಾ ಮುಖ್ಯಸ್ಥರ ಮೇಲೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಹಾಗೂ ಸುಪ್ರೀಂ ಕೋರ್ಟ್ ನಿರ್ಧೆಶನದಂತೆ Empirical data (ದತ್ತಾಂಶ) ಪಡೆದ ತಕ್ಷಣವೇ 101 ಪರಿಶಿಷ್ಟ ಜಾತಿಗಳ ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಬೇಕು.
ಸಮಿತಿಯ ಪರವಾಗಿ ಮೋಹನ್ ರಾಜುಗೌಡ ಜಿಲ್ಲಾ ಸಂಚಾಲಕರು ಮನವಿ ನೀಡಿದರು ಪದಾಧಿಕಾರಿಗಳಾದ ಅರುಣ್ ಕುಮಾರ್ ನಾಟೇಕಾರ ಜಿಲ್ಲಾ॥ ಸಂ ಸಂಚಾಲಕರು, ಮಲ್ಲಿಕಾರ್ಜುನ ಕಟ್ಟಿಮನಿ ಜಿಲ್ಲಾ ಖಜಾಂಚಿ, ಅಶೋಕ ಗುರುಮಠಕಲ್ ತಾಲೂಕ ಸಂಚಾಲಕರು, ರಿಯಾಜ್, ಸುರೇಶ್, ಹನುಮಂತ ಗದ್ದೂರ ತಾಲೂಕ ಸಂಚಾಲಕರು, ಪ್ರವೀಣ ಹೊಸಳ್ಳಿ ಜಿಲ್ಲಾ ಸಂ ಸಂಚಾಲಕರು ಶಹಾಪುರ, ಭೀಮರಾಯ ಕರಣಿಗಿ ತಾಲೂಕ ಖಜಾಂಚಿ ಶಹಾಪುರ, ಶರಣಪ್ಪ ಸಾವೂರ ಜಿಲ್ಲಾ ಅಧ್ಯಕ್ಷರು ಎಂ.ಎಸ್.ಎಸ್ ಶಹಾಪುರ, ಹೊನ್ನಪ್ಪ ನಾಟೇಕಾರ ಸಂ.ಸಂಚಾಲಕರು, ಆಂಜನೇಯ ಟೊಣ್ಣೂರ, ಕಾಮಣ್ಣ ದೇವಿನಗರ, ಸುಂದರ ರಸ್ತಾಪೂರ, ಭೀಮಶಂಕರ ಮಲ್ದಾರ, ಹೊನ್ನಪ್ಪ ವಣಿ, ಹಣಮಂತ ಹುಲಕಲ್ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















